FILM
ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾದ ಸೋನಲ್ ಮತ್ತು ತರುಣ್
ಮಂಗಳೂರು ಸೆಪ್ಟೆಂಬರ್ 02: ಇತ್ತೀಚೆಗಷ್ಟೇ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂಥೆರೋ ಇದೀಗ ಮಂಗಳೂರಿನಲ್ಲಿ ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.
ಸೊನಲ್ ಮೊಂಥೆರೋ ಮಂಗಳೂರಿನವರಾಗದ್ದು, ಅವರ ಕುಟುಂಬಸ್ಥರು ಮಂಗಳೂರಿನಲ್ಲೇ ಇದ್ದಾರೆ. ಹೀಗಾಗಿ ಅವರು ಆಗಸ್ಟ್ 11ರಂದು ಬೆಂಗಳೂರಿನ ಪೂರ್ಣಿಮಾ ಪ್ಯಾಲೆಸ್‌ನಲ್ಲಿ ಅದ್ಧೂರಿಯಾಗಿ ಹಿಂದೂ ಸಂಪ್ರದಾಯದಂತೆ ಕುಟುಂಬಸ್ಥರು, ಗುರು, ಹಿರಿಯರ ಸಮ್ಮುಖದಲ್ಲಿ ಈ ನವ ಜೋಡಿ ಸಪ್ತಪದಿ ತುಳಿದಿತ್ತು. ಬಳಿಕ ಮಂಗಳೂರಿನಲ್ಲಿ ಸಂಪೂರ್ಣವಾಗಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.
ಕ್ರಿಶ್ಚಿಯನ್ ಸಂಪ್ರದಾಯದಂತೆ ತರುಣ್ ಸುಧೀರ್ ಹಾಗೂ ಸೋನಲ್ ಮಂಗಳೂರಿನ ಚರ್ಚ್ ಒಂದರಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ. ಸೋನಲ್ ಅವರು ಬಿಳಿ ಬಣ್ಣದ ಲಾಂಗ್ ಗೌನ್ನಲ್ಲಿ ಮಿಂಚಿದ್ದರೆ, ತರುಣ್ ಸುಧೀರ್ ವೈಟ್ ಸೂಟ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಚರ್ಚ್ ವೆಡ್ಡಿಂಗ್ ಬಳಿಕ ಸ್ಟಾರ್ ಜೋಡಿ ಮಂಗಳೂರಿನಲ್ಲಿ ಅದ್ಧೂರಿ ರೆಸೆಪ್ಷನ್ ಸಹ ಮಾಡಿಕೊಂಡಿದೆ. ಈ ಅದ್ಧೂರಿ ರೆಸೆಪ್ಷನ್ನಲ್ಲಿಯೂ ತರುಣ್ ಸುಧೀರ್ ಬ್ರೌನ್ ಸೂಟ್ ಹಾಗೂ ನಟಿ ಸೋನಲ್ ಸೀರೆಯಲ್ಲಿ ಮಿಂಚಿದ್ದಾರೆ.