BELTHANGADI
ಕಟ್ಟಿಗೆಯಲ್ಲಿ ಹಲ್ಲೆ ಮಾಡಿ ತಂದೆಯನ್ನೇ ಕೊಲೆ ಮಾಡಿದ ಮಗ

ಬೆಳ್ತಂಗಡಿ, ಜನವರಿ 18: ತಂದೆಯನ್ನೇ ಮಗನೊಬ್ಬ ಕೊಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಮುಂಡ್ಯೊಟ್ಟು ಎಂಬಲ್ಲಿ ಸೋಮವಾರ ನಡೆದಿದೆ.
ಶ್ರೀಧರ ಪೂಜಾರಿ (55) ಅವರನ್ನು ಅವರ ಪುತ್ರ ಹರೀಶ ( 27) ಕೊಲೆಗೈದಿದ್ದಾನೆ. ಬೆಂಗಳೂರಿನಲ್ಲಿ ಪ್ರೀತಿಸಿ ವಿವಾಹವಾಗಿದ್ದು, ಮನೆಗೆ ಕರೆತಂದಿರುವುದನ್ನು ತಂದೆ ವಿರೋಧಿಸಿದ್ದಕ್ಕೆ ಕೋಪಗೊಂಡು ಕುಡಿದ ಮತ್ತಿನಲ್ಲಿ ಹರೀಶ ಕಟ್ಟಿಗೆಯಲ್ಲಿ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಗಂಭೀರ ಗಾಯಗೊಂಡು ಶ್ರೀಧರ ಪೂಜಾರಿ ಮೃತಪಟ್ಟಿದ್ದಾರೆ.

ಈಗಾಗಲೇ ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಮತ್ತು ಸಿಬಂದಿ ಧಾವಿಸಿದ್ದು ಸ್ಥಳ ಮಹಜರು ನಡೆಸಿ, ಕೃತ್ಯವೆಸಗಿದ ಮಗನನ್ನು ಬಂಧಿಸಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.