Connect with us

    LATEST NEWS

    20 ರೂ ನೀರಿನ ಬಾಟಲ್ ಗಾಗಿ ಬರೋಬ್ಬರಿ 5 ವರ್ಷದ ಹೋರಾಟ, ಸಿಕ್ಕಿದ ಪರಿಹಾರವೇಷ್ಟು ಗೋತ್ತಾ?

    ಅಹಮದಾಬಾದ್, ಜನವರಿ 18 ​: ಕೋರ್ಟು ಕೇಸು ಅಂದ್ರೆ  ಸಹವಾಸ ಬೇಡಪ್ಪ ಅಂತ ಹೋಗೋರೆ ಜಾಸ್ತಿ, ಅಂತದ್ರಲ್ಲಿ ಕೇವಲ 20/- ನೀರಿನ ಬಾಟಲ್ ಗಾಗಿ ಬರೋಬ್ಬರಿ 5 ವರ್ಷ ಹೋರಾಡಿದ್ದಾರೆ ಈ ವ್ಯಕ್ತಿ. ಹೌದು ಕೆಲವು ಸಾರ್ವಜನಿಕ ಪ್ರದೇಶಗಳು, ಮಾಲ್​ಗಳು ಮತ್ತು ಚಿತ್ರಮಂದಿರಗಳಲ್ಲಿ ಕೆಲ ಆಹಾರ ಪದಾರ್ಥಗಳ ಬೆಲೆ ನೋಡಿದರೆ ನಮಗೆ ಅಚ್ಚರಿಯಾಗುವುದು ಖಂಡಿತ. ಹೊರಗಡೆ ಪಾಪ್​ಕಾರ್ನ್​ ಕೇವಲ 10 ರೂಪಾಯಿಗೆ ಸಿಕ್ಕರೆ, ಅದೇ ಪಾಪ್​ಕಾರ್ನ್​ 15 ರಿಂದ 150 ರೂ. ವರೆಗೆ ಚಿತ್ರಮಂದಿರಗಳಲ್ಲಿ ಚಾರ್ಜ್​ ಮಾಡುತ್ತಾರೆ.

    ನಮ್ಮ ಹವ್ಯಾಸಗಳನ್ನೇ ಲಾಭವಾಗಿ ಮಾಡಿಕೊಳ್ಳುವ ಅನೇಕ ಜನರಿರುವುದನ್ನು ನಾವು ನೋಡಿದ್ದೇವೆ. ಅದರಂತೆಯೇ ಅಹಮದಾಬಾದ್​ನ ರೋಹಿತ್​ ಪಾಟಿಲ್​ (67) ಅವರು ಇದೇ ರೀತಿಯ ಅನುಭವವನ್ನು ಎದುರಿಸಿ ಐದು ವರ್ಷಗಳ ಬಳಿಕ ಗೆಲವು ಸಾಧಿಸಿದ್ದಾರೆ. ಐದು ವರ್ಷಗಳ ಹಿಂದೆ ರೆಸ್ಟೋರೆಂಟ್​ ಒಂದು 20 ರೂ. ಬೆಲೆಯ ನೀರಿನ ಬಾಟಲ್​ಗೆ 150 ರೂ. ಚಾರ್ಜ್​ ಮಾಡಿದ್ದರು. ಇದರ ವಿರುದ್ಧ ಕೊರ್ಟ್​​ ಮೆಟ್ಟಿಲೇರಿದ್ದ ರೋಹಿತ್​ ಐದು ವರ್ಷಗಳ ಬಳಿಕ ಗೆಲುವು ಕಂಡಿದ್ದಾರೆ.

    ಅಹಮದಾಬಾದ್​ನ ಎಸ್​ಜಿ​ ಹೆದ್ದಾರಿಯಲ್ಲಿರುವ ಹೋಟೆಲ್​ಗೆ ರೋಹಿತ್​ ಅವರು ತಮ್ಮ ಸ್ನೇಹಿತರೊಂದಿಗೆ ಐದು ವರ್ಷಗಳ ಹಿಂದೆ ತೆರಳಿದ್ದರು. ನೆಚ್ಚಿನ ಆಹಾರಗಳ ಜತೆ ನೀರಿನ ಬಾಟಲ್​ ಅನ್ನು ಆರ್ಡರ್​ ಮಾಡಿದ್ದರು. ಊಟದ ಬಳಿಕ ಬಿಲ್​ ನೋಡಿದ ರೋಹಿತ್​ ಅವರಿಗೆ ಶಾಕ್​ ಎದುರಾಗಿತ್ತು. ನೀರಿನ ಬಾಟಲ್​ಗೆ ಬರೋಬ್ಬರಿ 164 ರೂಪಾಯಿ ಬಿಲ್​ ಮಾಡಲಾಗಿತ್ತು. ತಪ್ಪಾಗಿ ನಮೂದಿಸಿರಬಹುದು ಎಂದು ವಿಚಾರಿಸಿದಾಗ, ಇಲ್ಲ ಬಾಟಲ್​ ಬೆಲೆ ಅಷ್ಟೇ ಎಂದು ಹೇಳಿದ್ದರು. ಬಳಿಕ ಮಾಲೀಕನ ಜತೆ ಸಾಕಷ್ಟು ವಾಗ್ವಾದ ಮಾಡಿದರು ಪ್ರಯೋಜನವಾಗದೆ ಕೊನೆಗೆ ಬಿಲ್ ಪಾವತಿಸಿ ಮರಳಿದ್ದರು. ಆದರೆ, ಅಷ್ಟಕ್ಕೆ ಸುಮ್ಮನಾಗದ ರೋಹಿತ್​ ಅವರು ಗ್ರಾಹಕರ ಕೋರ್ಟ್​ಗೆ ಹೋಟೆಲ್​ ಕ್ರಮವನ್ನು ಪ್ರಶ್ನಿಸಿ ದಾವೆ ಹೂಡಿದ್ದರು.

    ಬಳಿಕ ಕೋರ್ಟ್​ ಹೋಟೆಲ್​ಗೆ ಲೀಗಲ್​ ನೋಟಿಸ್​ ಕಳುಹಿಸಿ ಪ್ರಕರಣ ಕುರಿತು ತಮ್ಮನ್ನು ಸಮರ್ಥಿಸಿಕೊಳ್ಳಲು ವಕೀಲರನ್ನು ಕಳುಹಿಸಲು ಸೂಚಿಸಿತ್ತು. ಇಬ್ಬರ ವಾದವನ್ನು ಆಲಿಸಿದ ಬಳಿಕ ನ್ಯಾಯಾಲಯ ಐದು ವರ್ಷಗಳ ಕಾಲ ಮುಂದೂಡಿತ್ತು. ರೋಹಿತ್​ ಸುಮಾರು 28 ಬಾರಿ ಕೋರ್ಟ್​ಗೆ ಹಾಜರಾಗಿದ್ದರು.

    ಒಂದು ಬಾಟಲಿ ನೀರಿಗಾಗಿ ಐದು ವರ್ಷಗಳ ಹೋರಾಟ ವ್ಯರ್ಥವಾಯಿತು ಎಂದು ಎಂದಿಗೂ ರೋಹಿತ್​ ಅವರು ಯೋಚಿಸಲಿಲ್ಲವಂತೆ. ತಾಳ್ಮೆಯಿಂದಲೇ ಪ್ರತಿ ಬಾರಿ ನ್ಯಾಯಾಲಯಕ್ಕೆ ಬಂದು ವಿಚಾರಣೆ ಎದುರಿಸುತ್ತಿದ್ದರು. ಈ ತಿಂಗಳ 5ರಂದು ನ್ಯಾಯಾಲಯ ರೋಹಿತ್​ ಪರವಾಗಿ ತೀರ್ಪು ಪ್ರಕಟಿಸಿದೆ. ನ್ಯಾಯಾಲಯ 5,500 ರೂ. ಪರಿಹಾರ ನೀಡುವಂತೆ ಹೋಟೆಲ್​ಗೆ ಆದೇಶಿಸಿದೆ.

    ಈ ಬಗ್ಗೆ ಮಾತನಾಡಿರುವ ರೋಹಿತ್​, ಕೋರ್ಟ್​ ತೀರ್ಪಿನ ಬಗ್ಗೆ ಸಮಾಧಾನವಿದೆ. ಇದೇ ನನ್ನ ಮೊದಲ ಪ್ರಕರಣವಲ್ಲ. ಈಗಾಗಲೇ ಅನೇಕ ಪ್ರಕರಣಗಳನ್ನು ದಾಖಲಿಸಿದ್ದೇನೆ. ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆಯಲು ಯಾವ ಕಂಪನಿಗೂ ಹಕ್ಕಿಲ್ಲ ಎಂದಿರುವ ರೋಹಿತ್​, ಗ್ರಾಹಕರನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳಬೇಕು. ಅದರನ್ನು ದರೋಡೆ ಮಾಡಬಾರದು. ಇದನ್ನು ಸಹಿಸಲು ಆಗುವುದಿಲ್ಲ ಎಂದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply