BELTHANGADI
ಹೊಸವರ್ಷದ ಎಣ್ಣೆ ಪಾರ್ಟಿ ಮುಗಿಸಿ ಅಪ್ಪನ ಮೇಲೆ ತಲವಾರ್ ಬೀಸಿದ ಮಗ

ಹೊಸವರ್ಷದ ಎಣ್ಣೆ ಪಾರ್ಟಿ ಮುಗಿಸಿ ಅಪ್ಪನ ಮೇಲೆ ತಲವಾರ್ ಬೀಸಿದ ಮಗ
ಮಂಗಳೂರು ಜನವರಿ 1: ಹೊಸ ವರ್ಷದ ದಿನವೇ ಕುಡಿದು ಬಂದು ಮನೆಯಲ್ಲಿ ದಾಂಧಲೆ ನಡೆಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಮಟ್ಲದಲ್ಲಿ ಈ ಘಟನೆ ನಡೆದಿದ್ದು , ಹೊಸವರ್ಷದ ಸಂಭ್ರಮದಲ್ಲಿ ಕಂಠಪೂರ್ತಿ ಕುಡಿದ ಮಗ ತನ್ನ ತಂದೆಯೇ ಮೇಲೆ ತಲವಾರ್ ನಿಂದ ದಾಳಿ ನಡೆಸಿದ್ದಾನೆ.
ಬೆಳ್ತಂಗಡಿ ತಾಲೂಕಿನ ಮಟ್ಲದ ಜ್ಯೋತಿಷಿ ಮಂಜುನಾಥ್ ಎಂಬವರ ಮಗ ನವೀನ್ ಈ ಕೃತ್ಯ ಎಸಗಿದ ಆರೋಪಿ. ಹೊಸವರ್ಷದ ಆಚರಣೆಯ ವೇಳೆ ಕಂಠಪೂರ್ತಿ ಕುಡಿದ ನವೀನ್ ತಂದೆಯ ಮೇಲೆಯೇ ದಾಳಿ ನಡೆಸಿದ್ದಾನೆ.

ಕುಡಿದ ಮತ್ತಿಗೆ ಮನೆಯಲ್ಲಿ ಇದ್ದ ಎಲ್ಲಾ ವಸ್ತುಗಳನ್ನು ನವೀನ್ ಧ್ವಂಸ ಮಾಡಿದ್ದು , ತಂದೆಯ ಮೇಲೆ ತಲವಾರ್ ನಿಂದ ದಾಳಿ ನಡೆಸಿದ್ದಾನೆ. ನಂತರ ಮನೆಯಲ್ಲಿ ದಾಂಧಲೆ ನಡೆಸಿ ಪರಾರಿಯಾಗಿದ್ದಾನೆ. ಬೆಳ್ತಂಗಡಿ ಠಾಣಾ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.