Connect with us

BELTHANGADI

ಶ್ರೀಕ್ಷೇತ್ರ ಧರ್ಮಸ್ಥಳ ವಿರುದ್ದ ಅಪಪ್ರಚಾರ – ಸೇವಾ ಟ್ರಸ್ಟ್ ನ ಅಧ್ಯಕ್ಷ ಕೆ. ಸೋಮನಾಥ್ ನಾಯಕ್ ಗೆ 3 ತಿಂಗಳು ಜೈಲು…!!

ಬೆಳ್ತಂಗಡಿ ಜೂನ್ 17: ಧರ್ಮಸ್ಥಳ ಕ್ಷೇತ್ರದ ವಿರುದ್ದ ಯಾವುದೇ ಹೇಳಿಕೆ ನೀಡದಂತೆ ನ್ಯಾಯಾಲಯದ ಪ್ರತಿಬಂಧಕಾಜ್ಞೆ ಇದ್ದರೂ ಕೂಡ ಮತ್ತೆ ಧರ್ಮಸ್ಥಳ ಕ್ಷೇತ್ರದ ವಿರುದ್ದ ಅಪಪ್ರಚಾ ಮಾಡಿದ ನಾಗರೀಕ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೆ. ಸೋಮನಾಥ್ ನಾಯಕ್ ಅವರಿಗೆ 3 ತಿಂಗಳ ಜೈಲು ವಾಸ ವಿಧಿಸಿ ಬೆಳ್ತಂಗಡಿ ನ್ಯಾಯಾಲಯ ಆದೇಶಿಸಿದೆ.


2013 ರಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ಇಲ್ಲಿನ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಸೋಮನಾಥ್ ನಾಯಕ್ ಮತ್ತು ಇತರರಿಗೆ ಕ್ಷೇತ್ರದ ವಿರುದ್ದ ಯಾವುದೇ ರೀತಿಯ ಹೇಳಿಕೆ ನೀಡಬಾರದೆಂದು ಪ್ರತಿಬಂಧಕಾಜ್ಞೆ ಆದೇಶ ಹೊರಡಿಸಿತ್ತು, ಆದರೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿ ಇತರ ಸಂಸ್ಥೆಗಳ ವಿರುದ್ಧ ಪದೇ ಪದೇ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಕ್ಕಾಗಿ ದೇವಸ್ಥಾನದ ಪರವಾಗಿ ಬಿ.ವರ್ಧಮನ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.


ನ್ಯಾಯಾಲಯದಲ್ಲಿ ನಡೆದ ವಿಚಾರಣೆ ನಂತರ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸತೀಶ್ ಕೆ.ಜಿ ತಮ್ಮ ಅಂತಿಮ ಆದೇಶದಲ್ಲಿ, ಈ ಪ್ರಕರಣದಲ್ಲಿ ತಮ್ಮ ಹಿಂದಿನ ತೀರ್ಪನ್ನು ಪುನರುಚ್ಚರಿಸಿದ್ದು, ಸೋಮನಾಥ್ ನಾಯಕ್ ಅವರಿಗೆ 3 ತಿಂಗಳು ಜೈಲು ವಾಸ ಹಾಗೂ ಧರ್ಮಸ್ಥಳಕ್ಕೆ 4.50 ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶಿಸಿದೆ. ಅಲ್ಲದೆ ಆರೋಪಗಳನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳು ತಮ್ಮ ಬಳಿ ಇಲ್ಲ ಎಂದು ತಿಳಿದ ನಂತರವೂ ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ಹೆಚ್ಚುವರಿ 2,000 ರೂ. ದಂಡ ನೀಡಿದೆ.

Advertisement
Click to comment

You must be logged in to post a comment Login

Leave a Reply