Connect with us

LATEST NEWS

ಮಂಗಳೂರು – ಹೃದಯಾಘಾತದಿಂದ ಹುತಾತ್ಮರಾದ ಯೋಧ ಮುರಳಿಧರ್ ರೈ

ಮಂಗಳೂರು ಜನವರಿ 24: ಮಂಗಳೂರು ಮೂಲದ ಯೋಧ ಹೃದಯಾಘಾತದಿಂದ ನಿಧನರಾದ ಘಟನೆ ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದಿದೆ. ಭೋಪಾಲ್ ನಲ್ಲಿ ‌ ಸಶಸ್ತ್ರ ಸೀಮಾ ಬಲ್​ನಲ್ಲಿ ಕರ್ತವ್ಯದಲ್ಲಿದ್ದ ಮುರಳಿಧರ್ ರೈ (37) ಹುತಾತ್ಮ ಯೋಧರಾಗಿದ್ದಾರೆ.


ಅವರು ನಿನ್ನೆ ಬೆಳಿಗ್ಗೆ ಮಲಗಿದ್ದಲ್ಲಿಯೇ ಹೃದಯಾಘಾತ ಸಂಭವಿಸಿ ಹುತಾತ್ಮರಾಗಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಹುತಾತ್ಮ ಯೋಧ‌ನ ಪಾರ್ಥಿವ ಶರೀರ ಆಗಮಿಸಿದ್ದು, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಸೇರಿದಂತೆ ಅಧಿಕಾರಿಗಳು ಸಕಲ ಸರ್ಕಾರಿ ಗೌರವ ಸಲ್ಲಿಸಿದರು. ಬಳಿಕ ಮೃತದೇಹವನ್ನು ಎ.ಜೆ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಯಿತು. ನಾಳೆ ಶಕ್ತಿನಗರದ ಯೋಧನ ಮನೆಯಲ್ಲಿ ಅಂತಿಮ ವಿಧಿ ವಿಧಾನ ನೆರವೇರಲಿದೆ.

2007ರಲ್ಲಿ ಕಾನ್ಸ್‌ಟೇಬಲ್ ಆಗಿ ಸಶಸ್ತ್ರ ಸೀಮಾ ಬಲ್​ಗೆ ಸೇರ್ಪಡೆಯಾಗಿದ್ದ ಮುರಳಿಧರ್ ರೈ, ಹವಾಲ್ದಾರ್ ಆಗಿ ಭೋಪಾಲ್​ನಲ್ಲಿ ಕರ್ತವ್ಯದಲ್ಲಿದ್ದರು. ಇಂದು ರಜೆಯ ಮೇಲೆ ಊರಿಗೆ ಬರಬೇಕಾಗಿದ್ದ ಮುರಳಿಧರ್ ರೈ, ಪತ್ನಿ ಹಾಗೂ ಆರು ತಿಂಗಳ ಮಗುವನ್ನು‌ ಅಗಲಿದ್ದಾರೆ.

Advertisement
Click to comment

You must be logged in to post a comment Login

Leave a Reply