LATEST NEWS
ಕೋಟ – ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಿರುವ ಸಂದರ್ಭ ಸಿಡಿಲು ಬಡಿದು ಸಾಫ್ಟವೇರ್ ಇಂಜಿನಿಯರ್ ಸಾವು
ಉಡುಪಿ ಡಿಸೆಂಬರ್ 11 : ನಿನ್ನೆ ರಾತ್ರಿ ಸಿಡಿಲು ಬಡಿದು ಸಾಫ್ಟವೇರ್ ಇಂಜಿನಿಯರ್ ಒಬ್ಬ ಸಾವನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕೋಟದ ವಂಡಾರಿನ ಬೋರ್ಡ್ ಕಲ್ಲಿನಲ್ಲಿ ನಿನ್ನೆ ಸಂಭವಿಸಿದೆ.
ಮೃತ ಯುವಕನನ್ನು ಸಾಫ್ಟ್ ವೇರ್ ಇಂಜಿನಿಯರ್ ಚೇತನ್ (24) ಎಂದು ಗುರುತಿಸಲಾಗಿದ್ದು, ಮನೆಯೊಳಗಡೆ ಲ್ಯಾಪ್‌ಟಾಪ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭ ಸಿಡಿಲು ಹೊಡೆದಿದೆ. ಸಿಡಿಲಿನ ಹೊಡೆತಕ್ಕೆ ಗಂಭೀರವಾಗಿ ಅಸ್ವಸ್ಥತಗೊಂಡಿದ್ದು ಚೇತನ್ ನ್ನು ತತ್ ಕ್ಷಣ ಬ್ರಹ್ಮಾವರದ ಖಾಸಗಿ ಆಸ್ಪತ್ರೆ ಗೆ ಕರೆದೊಯ್ಯಲಾಯಿತು. ಆದರೆ ಅಷ್ಟರೊಳಗೆ ಚೇತನ್ ಮೃತಪಟ್ಟಿದ್ದರು.
ಚೇತನ ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿಯಾಗಿದ್ದು ಕೊರೊನಾ ಲಾಕ್ ಡೌನ್ ನಂತರ ಹಲವು ತಿಂಗಳಿಂದ ಮನೆಯಲ್ಲೇ ಕಾರ್ಯನಿರ್ವಹಿಸುತ್ತಿದ್ದ. ಈತನದ್ದು ತೀರಾ ಬಡತನದ ಕುಟುಂಬವಾಗಿದ್ದು ಸಾಕಷ್ಟು ಕಷ್ಟಪಟ್ಟು ಇಂಜಿನಿಯರಿಂಗ್ ಪದವಿ ಮುಗಿಸಿದ್ದ ಹಾಗೂ ಮನೆಗೆ ಆಧಾರವಾಗಿದ್ದ. ಮೃತನು ತಂದೆ,ತಾಯಿ, ಸಹೋದರಿಯನ್ನು ಅಗಲಿದ್ದಾನೆ.
Facebook Comments
You may like
-
ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ನಿಂದನಾತ್ಮಕ ಪೋಸ್ಟ್
-
ಮಧ್ಯರಾತ್ರಿಯೂ ಕೆಲಸ ಮಾಡುವ ಮಂಗಳೂರಿನ ಸಬ್ ರಿಜಿಸ್ಟರ್ ಕಚೇರಿಗೆ ಜಿಲ್ಲಾ ಉಸ್ತುವಾರಿ ಸಚಿವರ ದಿಢೀರ್ ಭೇಟಿ
-
ಏಷ್ಯಾದಲ್ಲಿ ಗೊರಿಲ್ಲ ಸಂತತಿ ಇಲ್ಲ…ಕತ್ತಲಲ್ಲಿ ಕರಡಿ ಕಂಡು ಗೊರಿಲ್ಲ ಎಂದಿರಬಹುದು…..!!
-
ಹೆಜ್ಜೇನು ದಾಳಿ ಆರು ಮಹಿಳೆಯರಿಗೆ ಗಂಭೀರ ಗಾಯ
-
ಸಭಾಪತಿಯವರ ಕುತ್ತಿಗೆಗೆ ಕೈ ಹಾಕಿ ಗೊಂದಲ ಸೃಷ್ಠಿಸಿದ್ದು ಕಾಂಗ್ರೇಸ್ – ಕೋಟ ಶ್ರೀನಿವಾಸ ಪೂಜಾರಿ
-
ಮೀನುಗಾರಿಕಾ ದೋಣಿ ದುರಂತದಲ್ಲಿ ಮೃತರಾದವರ ಕುಟುಂಬಕ್ಕೆ 6 ಲಕ್ಷ ರೂಪಾಯಿ ಪರಿಹಾರ
You must be logged in to post a comment Login