UDUPI
ಮಕ್ಕಳ ರಕ್ಷಣೆ ಸಾಮಾಜಿಕ ಹೊಣೆ: ಸಚಿವ ಪ್ರಮೋದ್
ಮಕ್ಕಳ ರಕ್ಷಣೆ ಸಾಮಾಜಿಕ ಹೊಣೆ: ಸಚಿವ ಪ್ರಮೋದ್
ಉಡುಪಿ, ಅಕ್ಟೋಬರ್ 16: ಮುಗ್ಧ ಮಕ್ಕಳ ರಕ್ಷಣೆ, ಪೋಷಣೆ ಸಾಮಾಜಿಕ ಜವಾಬ್ದಾರಿ; ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಹೊಣೆ ಇಲಾಖೆಗಳಿಗಿದೆ, ಅಧಿಕಾರಿಗಳು ನಿಷ್ಠೆಯಿಂದ ಈ ಕರ್ತವ್ಯವನ್ನು ನಿಭಾಯಿಸಬೇಕು ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು, ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಇಂದು ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಉಡುಪಿ ಜಿಲ್ಲೆ ಇದರ ಸಂಯಕ್ತ ಆಶ್ರಯದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಗ್ರಾಮ ಪಂಚಾಯತ್ ನೋಡೆಲ್ ಅಧಿಕಾರಿಗಳಿಗೆ ಮಕ್ಕಳ ಹಕ್ಕುಗಳು ಮತ್ತು ರಕ್ಷಣೆ, ಮಕ್ಕಳ ಗ್ರಾಮ ಸಭೆ, ಪೋಕ್ಸೋ ಕಾಯಿದೆ ಮತ್ತು ಬಾಲನ್ಯಾಯ ಕಾಯ್ದೆ ವಿಷಯದಲ್ಲಿ ಆಯೋಜಿಸಲಾದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶದಲ್ಲಿ ಮಕ್ಕಳ ಮತ್ತು ಯುವಕರ ಸಂಖ್ಯೆ ಹೆಚ್ಚಾಗಿದ್ದು, ಯುವಶಕ್ತಿಯ ಮೇಲೆ ದೇಶದ ಭವಿಷ್ಯ ನಿಂತಿದೆ. ಮಕ್ಕಳ ಮೇಲಾಗುವ ಶೋಷಣೆಯನ್ನು ಸಂಪೂರ್ಣ ತಡೆಯಬೇಕಾಗಿದೆ ಎಂದರು.