LATEST NEWS
ಏಸುಕ್ರಿಸ್ತರ ಪೋಟೋದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮುಖ ದೂರು ದಾಖಲು

ಏಸುಕ್ರಿಸ್ತರ ಪೋಟೋದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮುಖ ದೂರು ದಾಖಲು
ಬಂಟ್ವಾಳ ಮಾರ್ಚ್ 7: ಕ್ರೈಸ್ತ ಸಮುದಾಯದ ಆರಾಧ್ಯ ಮೂರ್ತಿ ಏಸುಕ್ರಿಸ್ತರ ಪೋಟೋವನ್ನು ವಿರೂಪಗೊಳಿಸಿ ಸಾಮಾಜಿಕ ಜಾಲತಾಣದಲ್ಲಿ ಆರೋಪದ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಕಾಂಗ್ರೇಸ್ ಮುಖಂಡನ ವಿರುದ್ದ ಪ್ರಕರಣ ದಾಖಲಾಗಿದೆ.
ಯುವ ಕಾಂಗ್ರೇಸ್ ಅಧ್ಯಕ್ಷ ಕಲ್ಲಡ್ಕ ನೆಟ್ಲ ನಿವಾಸಿ ಪ್ರಶಾಂತ್ ಕುಲಾಲ್ ಯಾನೆ ಮುನ್ನ ಎಂಬವರ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಶಾಂತ್ ಅವರು ಅವರ ಪೇಸ್ ಬುಕ್ ಖಾತೆಯಲ್ಲಿ ನಿಶಾಂತ್ ಮಂಡಗದ್ದೆ ಎಂಬವರು ಹಾಕಿದ ಪೋಸ್ಟ್ ಒಂದನ್ನು ಶೇರ್ ಮಾಡಿ ಕ್ರೈಸ್ತ ಸಮುದಾಯಕ್ಕೆ ನೋವು ಮಾಡಿದ್ದಾರೆ ಎಂದು ಬಂಟ್ವಾಳ ಬಿಜೆಪಿ ಮುಖಂಡ ರೋನಾಲ್ಡ್ ಡಿ.ಸೋಜ ದೂರಿನಲ್ಲಿ ತಿಳಿಸಿದ್ದಾರೆ.

ಕ್ರೈಸ್ತರ ಸರ್ವತೋಮುಖ ಅಭಿವೃದ್ಧಿಗೆ ರೂ.200 ಕೋಟಿ ಮೀಸಲಿಟ್ಟ ಬಿ.ಎಸ್.ಯೇಸುಕ್ರಿಸ್ತ!! ಎಂಬ ಬರಹದ ಕೆಳಗೆ ಏಸುಕ್ರಿಸ್ತನ ಮುಖಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಮುಖವನ್ನು ಜೋಡಿಸಿ ವಿರೂಪಗೊಳಿಸಲಾಗಿದೆ.
ಅಲ್ಲದೆ ಅದೇ ಪೋಸ್ಟ್‌ಗೆ ಕಾಂಗ್ರೇಸ್, ಸಮ್ಮಿಶ್ರ ಸರಕಾರ ಕ್ರೈಸ್ತರ ಅಭಿವೃದ್ಧಿ ಗೆ ಹಣ ನೀಡಿದರೆ ಒಲೈಕೆ, ಬಿಜೆಪಿಗರು ನೀಡಿದರೆ ಅದು ಆರೈಕೆ ಎಂದು ಬರೆದು ಪ್ರಶಾಂತ್ ಕುಲಾಲ್ ಶೇರ್ ಮಾಡಿದ್ದಾರೆ.
ಇದರಿಂದ ಕ್ರೈಸ್ತ ಸಮುದಾಯಕ್ಕೆ ನೋವಾಗಿದ್ದು, ಇವರ ವಿರುದ್ದ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ರೊನಾಲ್ಡ್ ಅವರು ದೂರಿನಲ್ಲಿ ತಿಳಿಸಿದ್ದಾರೆ.