LATEST NEWS
ಉಡುಪಿ ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಆಯ್ಕೆ ಟ್ವಿಟರ್ ನಲ್ಲಿ ಜಯಪ್ರಕಾಶ್ ಹೆಗ್ಡೆ ಪರ ಅಭಿಯಾನ

ಉಡುಪಿ ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಆಯ್ಕೆ ಟ್ವಿಟರ್ ನಲ್ಲಿ ಜಯಪ್ರಕಾಶ್ ಹೆಗ್ಡೆ ಪರ ಅಭಿಯಾನ
ಉಡುಪಿ ಮಾರ್ಚ್ 16: ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಾಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರ ಈಗ ದೇಶ ಮಟ್ಟದಲ್ಲಿ ಟ್ರೆಂಡಿಂಗ್ ಆಗಿದೆ. ನಾಳೆ ಬಿಜೆಪಿ ಕೋರ್ ಕಮಿಟಿ ಮೀಟಿಂಗ್ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪರ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಯುತ್ತಿದೆ.
ಉಡುಪಿ ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಕಾಂಗ್ರೆಸ್ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ನಡುವೆ ಆಯ್ಕೆ ಕಸರತ್ತು ಜೋರಾಗಿದೆ.

ಆಕಾಂಕ್ಷಿಗಳ ಪಟ್ಟಿಯಲ್ಲಿ ಯಶ್ಪಾಲ್ ಸುವರ್ಣ ಹಾಗೂ ಮಾಜಿ ಶಾಸಕ ಜೀವರಾಜ್ ಕೂಡ ಇದ್ದಾರೆ. ಆದ್ರೆ ಜಯಪ್ರಕಾಶ್ ಹೆಗ್ಡೆ ಪರ ದಿನದಿಂದ ದಿನಕ್ಕೆ ಒಲವು ಹೆಚ್ಚುತ್ತಾ ಇದ್ದು, ಹೆಗ್ಡೆ ಪರ ಟ್ವೀಟರ್ ನಲ್ಲಿ #JPH4udupichikamagalur2019 ಟ್ವೀಟ್ ಟ್ರೆಂಡ್ ನಲ್ಲಿ ಆರನೆ ಸಾಲಿನಲ್ಲಿತ್ತು. ಈಗಾಗ್ಲೇ ಜೆಪಿಹೆಚ್ ಪರ ಟ್ವೀಟ್ 5ಸಾವಿರಕ್ಕೆ ಮುಟ್ಟಿದೆ. ನಾಳಿನ ಬಿಜೆಪಿ ಕೋರ್ ಕಮಿಟಿ ಮೀಟಿಂಗ್ ಹಿನ್ನಲೆಯಲ್ಲಿ ಈಗಾಗಲೆ ಟ್ವೀಟ್ 5 ಸಾವಿರ ಗಡಿ ಮುಟ್ಟಿರುವುದು ಜೆಪಿ ಹೆಗ್ಡ ಅವರಿಗೆ ಪ್ಲಸ್ ಆಗುವ ಸಾಧ್ಯತೆ ಇದೆ ಅನ್ನೋ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.