ಯಕ್ಷಗಾನದಲ್ಲೂ “‘ನಿಖಿಲ್ ಎಲ್ಲಿದೀಯಪ್ಪ…’ ಟ್ರೋಲ್​

ಮಂಗಳೂರು ಮಾರ್ಚ್ 16: ಲೋಕಸಭೆ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಈ ಹಿನ್ನಲೆಯಲ್ಲಿ ಗೌಡರ ಕುಟುಂಬ ರಾಜಕಾರಣದ ಬಗ್ಗೆ ವ್ಯಾಪಕ ಚರ್ಚೆಗಳಾಗುತ್ತಿದೆ.

ಅದರ ಜೊತೆಗೆ ನಿಖಿಲ್ ಎಲ್ಲಿದೀಯಪ್ಪ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕೇಳುವ ಆಡಿಯೋ ಒಂದು ಕರ್ನಾಟಕದಾದ್ಯಂತ ವೈರಲ್ ಆಗಿದ್ದು, ಆ ಆಡಿಯೋ ಮಿಕ್ಸ್ ಮಾಡಿದ ಟ್ರೋಲ್ ಗಳು ಸಖತ್ ಸೌಂಡ್ ಮಾಡುತ್ತಿದೆ. ಈ ಟ್ರೋಲ್ ಗಳಿಗೆ ಕರಾವಳಿಯ ಗಂಡು ಕಲೆ ಯಕ್ಷಗಾನ ಕೂಡ ಸೇರಿಕೊಂಡಿದ್ದು, ಯಕ್ಷಗಾನದಲ್ಲೂ ನಿಖಿಲ್ ಎಲ್ಲಿದೀಯಪ್ಪ ತರಹದೇ ಸಂಭಾಷಣೆಯನ್ನು ಸೇರಿಸಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ.

ಕಾರ್ಕಳ ಸಮೀಪದ ಪಳ್ಳಿಯಲ್ಲಿ ಶುಕ್ರವಾರ ನಡೆದ ತುಳು ಯಕ್ಷಗಾನ ಪ್ರದರ್ಶನದಲ್ಲಿ ಹಾಸ್ಯ ಕಲಾವಿದರಿಬ್ಬರು ಕುಮಾರಸ್ವಾಮಿ ಹಾಗೂ ನಿಖಿಲ್ ನಡುವಿನ ಸಂಭಾಷಣೆಯನ್ನು ಹಾಸ್ಯಮಯವಾಗಿ ಹೇಳುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಇಲ್ಲಿ ಕಲಾವಿದ, ‘ವಾವನ ಎಲ್ಲಿದೀಯಪ್ಪ..’ ಎನ್ನುತ್ತಾರೆ.

ಈ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ ಆಗಿರುವ ತಂದೆ–ಮಗನ ಸಂಭಾಷಣೆ ವಿಡಿಯೊ ಸಾಲಿಗೆ ಕರಾವಳಿಯ ಯಕ್ಷಗಾನ ಮಾದರಿಯ ತುಣುಕೊಂದು ಸೇರ್ಪಡೆಯಾಗಿದೆ.

VIDEO