LATEST NEWS
ಉಕ್ರೇನ್ ಸೇನೆಗೆ ಜಗತ್ತಿನ ಡೆಡ್ಲಿ ಸ್ನೈಫರ್ ಕೆನಡಾ ಯೋಧ ವಾಲಿ ಸೇರ್ಪಡೆ….!!
ಉಕ್ರೇನ್ : ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧಕ್ಕೆಇದೀಗ ವಿವಿಧ ದೇಶಗಳಿಂದ ಯೋಧರು ಉಕ್ರೇನ್ ಪರವಾಗಿ ಯುದ್ದ ಕಣಕ್ಕೆ ಇಳಿದಿದ್ದು. ಇದೀಗ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಅವರ ಮನವಿ ಮೇರೆಗೆ ಜಗತ್ತಿನ ಅತ್ಯಂತ ವಿಧ್ವಂಸಕ ಸ್ನೈಪರ್ ಎಂದೇ ಖ್ಯಾತರಾದ ಕೆನಡಾ ಮೂಲದ ಯೋಧ ವಾಲಿ ಇದೀಗ ಉಕ್ರೇನ್ ಪರವಾಗಿ ಯುದ್ಧ ಮಾಡುತ್ತಿದ್ದಾರೆ.
ಕೆನಡಾ ಸೇನೆಯಲ್ಲಿದ್ದ ಡೆಡ್ಲಿ ಸ್ನೈಪರ್ ಎಂದೇ ಖ್ಯಾತರಾಗಿರುವ ಯೋಧ ವಾಲಿ ಉಕ್ರೇನ್ಗೆ ಕಾಲಿಟ್ಟಿದ್ದು, ಉಕ್ರೇನ್ ಪರವಾಗಿ ರಷ್ಯಾ ವಿರುದ್ಧ ಯುದ್ಧ ಮಾಡುತ್ತಿದ್ದಾರೆ. ಕೆನಡಾ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸೈನಿಕ ಈ ವಾಲಿ.. ವಾಲಿ ಎಂಬುದು ಈತನ ನಿಜವಾದ ಹೆಸರಲ್ಲ.. ಈ ಹಿಂದೆ ಆಫ್ಘಾನಿಸ್ತಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಈ ಸೈನಿಕ ಹಲವು ಬಂಡುಕೋರರನ್ನು ಹೊಡೆದುರುಳಿಸಿದ್ದ. ಹೀಗಾಗಿ ಈ ವಾಲಿ ಎಂಬ ಹೆಸರನ್ನು ಇವರಿಗೆ ಅಫ್ಘಾನಿಸ್ತಾನ ಕೊಟ್ಟಿದೆ.
ವಾಲಿ ಎಂಬುದು ಅರೇಬಿಕ್ ಶಬ್ದವಾಗಿದ್ದು, ಹೀಗೆಂದರೆ ರಕ್ಷಕ ಎಂಬ ಅರ್ಥ ಕೊಡುತ್ತದೆ. ಇದೀಗ ಈ ಸೈನಿಕ ಇದೇ ವಾಲಿ ಎಂಬ ಹೆಸರಿನಿಂದಲೇ ಜಗತ್ ಪ್ರಸಿದ್ಧಿ ಪಡೆದಿದ್ದಾರೆ.
ಇನ್ನು ವಾಲಿ ಉಕ್ರೇನ್ ನಲ್ಲಿ ಕರ್ತವ್ಯಕ್ಕೆ ಹಾಜರಾದ ಮೊದಲ ದಿನವೇ ರಷ್ಯಾದ ಆರು ಸೈನಿಕರನ್ನು ಹೊಡೆದುರುಳಿಸಿದ್ದಾರೆ ಎಂದು ಸುದ್ದಿಯಾಗಿದೆ. ಒಂದು ದಿನದಲ್ಲಿ 40 ಜನರನ್ನು ಕೊಲ್ಲುವ ಸಾಮರ್ಥ್ಯ ಇರುವ ವಾಲಿ, ಅತ್ಯಂತ ಡೆಡ್ಲಿ ಸ್ನೈಪರ್ ಎಂಬ ಕೀರ್ತಿ ಹೊಂದಿದ್ದಾರೆ.