Connect with us

    DAKSHINA KANNADA

    ಭಜನಾ ಮಂದಿರ ಜಾಗಕ್ಕೆ ಸಂಬಂಧಿಸಿದಂತೆ ಗಲಾಟೆ- ಮೂವರು ಆಸ್ಪತ್ರೆಗೆ ದಾಖಲು

    ಪುತ್ತೂರು ಮಾರ್ಚ್ 14: ಭಜನಾ ಮಂದಿರದ ಜಾಗಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಈ ಮೂವರು ಆಸ್ಪತ್ರೆಗೆ ದಾಖಲಾದ ಘಟನೆ ಆರ್ಯಾಪು ಗ್ರಾಮದ ದೊಡ್ಡಡ್ಕ ಎಂಬಲ್ಲಿ ನಡೆದಿದೆ.


    ಪೂವಪ್ಪ ನಾಯ್ಕ್ ರವರು ಮಹಾಲಕ್ಷ್ಮಿ ಭಜನಾ ಮಂದಿರದ ಸದಸ್ಯರಾಗಿದ್ದು, ಭಜನಾ ಮಂದಿರದ ಸುತ್ತ ಹುಲ್ಲು ತೆಗೆದು ಸ್ವಚ್ಛಗೊಳಿಸಲು ತೆರಳಿದ ವೇಳೆ ಹತ್ತಿರದ ಮನೆಯ ನಾಗರಾಜ ಆಚಾರ್ಯ, ನಾರಾಯಣ ಆಚಾರ್ಯ, ಸರೋಜಿನಿ, ನಾಗರಾಜ ಆಚಾರ್ಯ ಅವರ ಪತ್ನಿ ಮತ್ತು ಅತ್ತಿಗೆ ಮಾರಕಾಯುಧಗಳನ್ನು ತಂದು ಪೂವಪ್ಪ ನಾಯ್ಕ್ ಮತ್ತು ಅವರ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಅಷ್ಟೇ ಅಲ್ಲದೇ ಅವರ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.


    ಆರ್ಯಾಪು ದೊಡ್ಡಡ್ಕದಲ್ಲಿರುವ ಜಾಗವು ಸರೋಜಿನಿ ರವರ ಪೂರ್ವಜರ ಜಾಗದಲ್ಲಿ, ಹಿಂದಿನಿಂದ ಇದ್ದ ಭಜನಾ ಮಂದಿರವನ್ನು ಅಲ್ಲಿ ನಿರ್ಮಿಸಿ ಭಜನಾ ಕಾರ್ಯವನ್ನು ನೆರವೇರಿಸಲಾಯಿತು, ದಿನ ಕಳೆದಂತೆ ಸ್ಥಳೀಯರನ್ನ ಕರೆಸಿ ಆ ಜಾಗದಲ್ಲಿ ಭಜನಾ ಕಾರ್ಯವನ್ನು ನೆರವೇರಿಸಲಾಯಿತು. ಕ್ರಮೇಣ ಸ್ಥಳೀಯರು ಸಾರ್ವಜನಿಕ ಮಂದಿರ ಎಂದು ಹೇಳಿ ಕಿರಿಕ್ ಮಾಡಿದ್ದು, ಈ ಬಗ್ಗೆ ಕೇಸು ದಾಖಲಿಸಿ 10 ವರ್ಷ ಕಳೆದಿದ್ದು, ಕೋರ್ಟ್ ನಿಂದ ಆ ಜಾಗದಲ್ಲಿ ಕೆಲಸ ಕಾರ್ಯ ನಿರ್ವಹಿಸದಂತೆ ತಡೆಯಾಜ್ಞೆ ನೀಡಿದ್ದು, ಈ ನಡುವೆಯೂ ದೊಡ್ಡಡ್ಕ ನಿವಾಸಿ ಪೂವಪ್ಪ ನಾಯ್ಕ್, ವೆಂಕಟಕೃಷ್ಣ ಭಟ್,ಸೇಸಪ್ಪ ನಾಯ್ಕ್ ಹಾಗೂ ಅವರ ಸಂಗಡಿಗರು ಆ ಜಾಗದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಅವರಲ್ಲಿ ಪ್ರಶ್ನಿಸಲು ತೆರಳಿದ ಸರೋಜಿನಿ, ಮತ್ತು ಅವರ ಸೊಸೆ ಹಾಗೂ ಮತ್ತೋರ್ವರ ಮೇಲೆ ಹಲ್ಲೆ ನಡೆಸಿದ್ದು, ಹುಲ್ಲು ತೆಗಿಯುವ ಮೆಷಿನ್ ಎಂದು ಸರೋಜಿನಿ ರವರ ಕೈ ಮೇಲೆ ಹಿಡಿದು ಹಲ್ಲೆಗೈದಿದ್ದಾರೆ ಎಂದು ಆರೋಪಿಸಿದ್ದಾರೆ.

    ಆರ್ಯಾಪು ಗ್ರಾಮದ ದೊಡ್ಡಡ್ಕ ನಿವಾಸಿ ಸರೋಜಿನಿ ಎಂಬವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮತ್ತೊಂದು ತಂಡದ ಪೂವಪ್ಪ ನಾಯ್ಕ್ ಮತ್ತು ಅವರ ಪತ್ನಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
    ಈ ಬಗ್ಗೆ ಎರಡು ತಂಡದವರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply