KARNATAKA
ಯೂಟ್ಯೂಬ್ ಗೆ ವಿಡಿಯೋ ಮಾಡಲು ನಾಗರಹಾವಿಂದ ಕಚ್ಚಿಸಿಕೊಂಡ ಯುವಕ
ಶಿರಸಿ: ಯುಟ್ಯೂಬ್ ಗೆ ವಿಡಿಯೋಗಾಗಿ ಇಲ್ಲೊಬ್ಬ ಹಾವಿನ ಜೊತೆ ಆಟವಾಡಲು ಹೋಗಿ ಆಸ್ಪತ್ರೆಗೆ ದಾಖಲಾಗಿದೆ. ಹಾವು ಕಚ್ಚಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಿರಸಿ ಕಸ್ತೂರಬಾ ನಗರದ ಯುವಕ ಮಾಝ್ ಸೈಯ್ಯದ್ (21) ಎಂಬ ಉರಗ ಪ್ರೇಮಿ, ಯೂಟ್ಯೂಬ್‌ಗೆ ವಿಡಿಯೊಗೋಸ್ಕರ ಮೂರು ನಾಗರ ಹಾವುಗಳ ಜೊತೆ ಚೆಲ್ಲಾಟ ಆಡಿದ್ದಾನೆ. ಈ ಸಂದರ್ಭ ಒಂದು ಹಾವು ಯುವಕನ ಕಚ್ಚಿದೆ. ಕೂಡಲೆ ಹಾವು ಕಡಿತಕ್ಕೊಳಗಾದ ಯುವಕನನ್ನು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ವಿಡಿಯೋವನ್ನು ಅರಣ್ಯ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವಿಷಕಾರಿ ಹಾವುಗಳ ವಿಚಾರದಲ್ಲಿ ಹುಷಾರಾಗಿರುವಂತೆ ತಿಳಿಸಿದೆ.
ಈ ಬಗ್ಗೆ ಮಾತನಾಡಿರುವ ಯುವಕ ಉರಗ ರಕ್ಷಣೆ ಮಾಡುವುದು ಹವ್ಯಾಸ. ಒಂದೇ ದಿನ ಮೂರು ಹಾವುಗಳನ್ನು ರಕ್ಷಿಸಿದ್ದೆ. ಅವುಗಳನ್ನು ಬಿಡುವ ಮುನ್ನ ವಿಡಿಯೊ ಮಾಡಿ ಯೂಟ್ಯೂಬ್‍ಗೆ ಅಪ್ಲೋಡ್ ಮಾಡುವ ಸಲುವಾಗಿ ಆಟವಾಡುವ ದೃಶ್ಯ ಸೆರೆಹಿಡಿಯುತ್ತಿದ್ದಾಗ ಘಟನೆ ನಡೆದಿದೆ ಎಂದಿದ್ದಾನೆ,.