Connect with us

  LATEST NEWS

  ನಾರಿಯ ಧೈರ್ಯಕ್ಕೆ ಸೆರೆಯಾದ ನಾಗರ…!!!ಕನ್ನಡತಿಯ ಸಾಹಸದ ವಿಡಿಯೋ ವೈರಲ್

  ನವದೆಹಲಿ : ಚೆಂದವಾಗಿ ಸೀರೆ ಉಟ್ಟು ದಿಬ್ಬಣಕ್ಕೆ ತರೆಳುತ್ತಿದ್ದ ನಾರಿಯೊಬ್ಬರು ಮನೆಯೊಂದರಲ್ಲಿ ಹೊಕ್ಕಿದ್ದ ನಾಗರಹಾವನ್ನು ಯಾವುದೇ ಸಾಧನಗಳಿಲ್ಲದೇ ಬರಿಗೈಯಲ್ಲಿ ಹಿಡಿದು ಜನರ ಮನಗೆದ್ದಿದ್ದಾರೆ. ಕರ್ನಾಟಕ ಮೂಲದ ನಿಜ಼ಾರ ಚಿಟ್ಟಿ ಅವರೇ ಹಾವು ರಕ್ಷಿಸಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.


  ನಿರ್ಜರಾ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ರೆಡಿಯಾಗಿದ್ದರು. ಈ ವೇಳೆ ಮನೆಯಲ್ಲಿ ಹಾವು ಬಂದಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಬಟ್ಟೆ ಬದಲಿಸಿಕೊಳ್ಳದೇ ಸೀರೆಯಲ್ಲಿಯೇ ಬಂದು ಯಾವುದೇ ಮುಂಜಾಗ್ರತ ಉಪಕರಣಗಳಿಲ್ಲದೇ ಬರಿಗೈಯಲ್ಲಿ ಹಾವನ್ನ ಹಿಡಿದು ಮನೆಯ ಸದಸ್ಯರ ಆತಂಕವನ್ನ ದೂರ ಮಾಡಿದ್ದಾರೆ.


  12 ಸೆಕೆಂಡ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಮೂಲೆಯಲ್ಲಿ ಹಡೆ ಬಿಚ್ಚಿ ಬುಸುಗುಡುತ್ತಿದ್ದ ನಾಗಪ್ಪನನ್ನು ನಿರ್ಜರಾ ರಕ್ಷಿಸಿದ್ದಾರೆ. ಸೀರೆ ಧರಿಸಿದ ಪರಿಣಾಮ ಹಾವು ಹಿಡಿಯಲು ಕಷ್ಟವಾಗುತ್ತಿದೆ. ಬಟ್ಟೆ ಬದಲಿಸಿ ಬರೋಷ್ಟರಲ್ಲಿ ಹಾವು ಅಪಾಯ ಮಾಡಿದ್ರೆ ಹೇಗೆ ಎಂದು ಬಂದೆ ಎಂದು ನಿರ್ಜರಾ ಹೇಳಿರುವುದು ವಿಡಿಯೋದಲ್ಲಿ ಕೇಳಬಹುದು.


  ನಿರ್ಜರಾ ಚಿಟ್ಟಿ ಮೂಲತಹ ಬೆಳಗಾವಿಯವರಾಗಿದ್ದು, ಅವರ ಪತಿ ಕೂಡ ಹಾವು ರಕ್ಷಣೆಯ ಕೆಲಸವನ್ನು ಮಾಡುತ್ತಿದ್ದಾರೆ. ನಿರ್ಜರಾ ಚಿಟ್ಟಿ ಅವರ ಹಾವುಗಳ ರಕ್ಷಣೆ ಕುರಿತಾದ ಒಂದು ಯ್ಯೂಟೂಬ್ ಚಾನೆಲ್ ಕೂಡ ಇದ್ದು ಅದರಲ್ಲಿ ಅವರು ಮನೆಗಳಲ್ಲಿ ನುಗ್ಗಿರುವ ಹಾವುಗಳನ್ನು ಹಿಡಿದು ರಕ್ಷಣೆ ಮಾಡಿರುವ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ, ಸರಿಸುಮಾರು 1500ಕ್ಕೂ ಅಧಿಕ ಹಾವುಗಳನ್ನು ಹಿಡಿದಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply