LATEST NEWS
ಕೋಳಿ ನುಂಗಲು ಹೋದ ಸಾರಿಬಳ ಹಾವು…!!
ಬೆಳ್ತಂಗಡಿ ಡಿಸೆಂಬರ್ 06: ಅಪರೂಪದ ಸಾರಿಬಳ ಹಾವೊಂದು ಕೋಳಿ ಮರಿಯನ್ನು ನುಂಗಲು ಪ್ರಯತ್ನಿಸಿದ ಗಟನೆ ಬೆಳ್ತಂಗಡಿಯ ಕೊಯ್ಯೂರು ಗ್ರಾಮದ ಅರಂತೊಟ್ಟು ಎಂಬಲ್ಲಿ ನಡೆದಿದ್ದು, ಇದನ್ನು ಉರಗ ಪ್ರೇಮಿ ಸ್ನೇಕ್ ಅಶೋಕ್ ಸುರಕ್ಷಿತವಾಗಿ ಹಿಡಿದು, ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ಕೊಯ್ಯೂರು ಗ್ರಾಮದ ಅರಂತೊಟ್ಟು ನಿವಾಸಿ ದೀಪಕ್ ಎಂಬುವರ ಮನೆಯಲ್ಲಿ ಸುಮಾರು 5 ಅಡಿ ಉದ್ದದ ಸಾರಿಬಳ ಹಾವು ಕೋಳಿಮರಿಯನ್ನು ನುಂಗುತ್ತಿದ್ದ ಸಮಯ ಅದನ್ನು ಕಂಡ ಮನೆಯವರು ಉರಗಮಿತ್ರ ಸ್ನೇಕ್ ಅಶೋಕ್ ಲಾಯಿಲ ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ತಕ್ಷಣ ಅವರು ಆಗಮಿಸಿ ರಕ್ಷಿಸಿದ್ದಾರೆ. ಫೋರೆಸ್ಟನ್ಸ್ ಬೆಕ್ಕು ಹಾವು ಅಥವಾ ಸಾರಿಬಳ ಎಂದೇ ಕರೆಯಲ್ಪಡುವ ಈ ಹಾವು ಹೆಚ್ಚಾಗಿ ಗುಜರಾತ್, ಕೇರಳ ಹಾಗೂ ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದ ಕಾಡುಗಳಲ್ಲಿ ಕಂಡು ಬರುತ್ತದೆ. ಇವು ಜನವಸತಿ ಪ್ರದೇಶದಲ್ಲಿ ಕಂಡುಬರುವುದು ತೀರಾ ವಿರಳ.
ಕೊಯ್ಯೂರಿನಲ್ಲಿ ಈ ಪ್ರಭೇದದ ಹಾವು ಕಂಡುಬಂದಿದೆ. ತನ್ನ 11 ವರ್ಷಗಳ ಹಾವು ಹಿಡಿಯುವ ಸೇವೆಯಲ್ಲಿ ಇದುವರೆಗೆ ಬೂದು ಬಣ್ಣದ ಸಾರಿಬಾಳ ಎರಡು ಬಾರಿ ಹಾಗೂ ತಿಳಿ ಕೆಂಪು ಕಂಡು ಕಂದು ಬಣ್ಣದ ಹಾವು ಇದೇ ಮೊದಲ ಬಾರಿ ಕಂಡು ಬಂದಿದೆ ಎಂದು ಅಶೋಕ್ ಅವರು ತಿಳಿಸಿದ್ದಾರೆ. ಇವು ವಿಷ ರಹಿತ ಹಾವುಗಳಾಗಿದ್ದು ಕಟ್ಟುಹಾವನ್ನು ಹೋಲುವುದರಿಂದ ಇವು ಕಂಡು ಬಂದಲ್ಲಿ ಜನರು ಕೊಲ್ಲಲು ಮುಂದಾಗುತ್ತಿದ್ದಾರೆ.