KARNATAKA
ತಿಂಡಿ ಪ್ರಿಯರೆ ಎಚ್ಚರ: ಕೇರಳದಿಂದ ಆಮದಾಗುವ ಈ ಆಹಾರಗಳಲ್ಲಿ ಅಪಾಯಕಾರಿ ಕೃತಕ ಬಣ್ಣ ಬಳಕೆ ಪತ್ತೆ
ಬೆಂಗಳೂರು: ಕೃತ ಬಣ್ಣಗಳ ಬಳಕೆ, ರಾಸಾಯನಿಕ ಮಿಶ್ರಣ, ರುಚ್ಚಿ ಹೆಚ್ಚಿಸುವಂತಹ ವಸ್ತುಗಳ ಬಳಕೆ ಮಾಡುವ ಆಹಾರಗಳನ್ನು ಸೇವಿಸಿದರೆ ಅವುಗಳಿಇಂದ ಅನಾರೋಗ್ಯಕ್ಕೆ ತುತ್ತಾಗುವುದು ಖಂಡಿತ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹಾಗೂ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಇಲಾಖೆ ಬೆಂಗಳೂರಿನಾದ್ಯಂತ ಕಾರ್ಯಾಚರಣೆ ಕೈಗೊಂಡು ಇಂತಹ ಅಪಾಯಕಾರು ವಸ್ತುಗಳನ್ನು ಪತ್ತೆಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.
ಇದೀಗ ಕೇರಳದಿಂದ ಆಮದಾಗಿ 31 ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣ ಪತ್ತೆಯಾಗಿದೆ. ದೀಪಾವಳಿ ಸಿಹಿ ತಿಂಡಿಗಳಲ್ಲಿಯೂ ಕೃತಕ ಬಣ್ಣಗಳ ಬಳಕೆ ಪತ್ತೆಯಾಗಿದೆ. ಎಲ್ಲಾ ಪದಾರ್ಥಗಳ ಉತ್ಪಾದನಾ ಘಟಕಗಳ ಮೇಲೆ ಕ್ರಮ ಕೈಗೊಳ್ಳಲು ಇಲಾಖೆ ನಿರ್ಧರಿಸಿದೆ.
ಹೊರ ರಾಜ್ಯದಿಂದ ಆಮದಾಗುವ ಆಹಾರ ಪದಾರ್ಥಗಳ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಪರೀಕ್ಷೆ ನಡೆಸಿದ್ದು, ಕೇರಳದಿಇಂದ ಆಮದಾಗುವ ಖಾರಾ ಮಿಕ್ಸ್ಚರ್, ಚಿಪ್ಸ್, ಹಲ್ವಾ, ಮುರುಕು, ರಸ್ಕ್, ಡ್ರೈಫ್ರೂಟ್ಸ್ ಸೇರಿದಂತೆ 31 ಪದಾರ್ಥಗಳಲ್ಲಿ ಕೃತಕ ಬಣ್ಣ ಬಳಸಲಾಗುತ್ತದೆ ಎಂದು ತಿಳಿದುಬಂದಿದೆ. ಇದು ಆರೋಗ್ಯಕ್ಕೆ ಹಾನಿಕಾರಕ ಎಂದು ಇಲಾಖೆ ತಿಳಿಸಿದೆ.
ಈ ತಿಂಡಿಗಳಲ್ಲ್ alura red, carmoisiine,tartrazine, sunset yellow ಸೇರಿದಂತೆ ವಿವಿಇಧ ಕೃತ ಬಣ್ಣ ಬಳಸಿರುವುದು ಪತ್ತೆಯಾಗಿದೆ. ಇವುಗಳ ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ.
ಕೆಲ ದಿನಗಳ ಹಿಂದೆ ಆರೋಗ್ಯ ಸುರಕ್ಷತಾ ಹಾಗೂ ಗುಣಮಟ್ಟ ಇಲಾಖೆ ಬೀದಿ ಬದಿ ಮಾರಾಟ ಮಾಡುವ ಗೋಬಿ ಮಂಚೂರಿ, ಪಾನಿಪುರಿ ಸೇರಿದಂತೆ ಅನೇಕ ತಿನಿಸುಗಳಲ್ಲಿ ಬಳಸುವ ಮಸಾಲೆ ಪದಾರ್ಥಗಳಲ್ಲಿ ಹಾನಿಕಾರಕ ಅಂಶಗಳಿವೆ ಎಂದು ತಿಳಿಸಿತ್ತು. ಇದೀಗ ತಿಂಡಿ ಪ್ರಿಯರಿಗೆ ಪ್ರಿಯವಾಗಿರುವ ಕುರುಕು-ಮುರುಕು, ಸಿಹಿ ತಿಂಡಿಗಳಲ್ಲಿಯೂ ಕೃತಕ ಬಣ್ಣ ಬಳಕೆ ಪತ್ತೆಯಾಗಿರುವುದು ಆತಂಕ ತಂದಿದೆ.