LATEST NEWS
ಅಚ್ಚರಿಗೆ ಕಾರಣವಾಗಿದೆ ಕೊರಗಜ್ಜನ ಸಾನಿಧ್ಯದಲ್ಲಿರುವ ಪುಟಾಣಿ ಆಮೆ ಮರಿ
ಅಚ್ಚರಿಗೆ ಕಾರಣವಾಗಿದೆ ಕೊರಗಜ್ಜನ ಸಾನಿಧ್ಯದಲ್ಲಿರುವ ಪುಟಾಣಿ ಆಮೆ ಮರಿ
ಉಡುಪಿ ಸೆಪ್ಟೆಂಬರ್ 28: ಉಡುಪಿ ಎಂಜಿಎಂ ಕಾಲೇಜು ಸಮೀಪ ಬುಡ್ನಾರು ಗ್ರಾಮ ಕೊರಗಜ್ಜ, ಮೂಕಾಂಬಿಕೆ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ಆಮೆ ಪ್ರತ್ಯಕ್ಷವಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಮಂಗಳವಾರದಂದು ರಾತ್ರಿ ಕ್ಷೇತ್ರದ ಅರ್ಚಕರು ಪೂಜೆ ವಿಧಿ ವಿಧಾನಕ್ಕೆಂದು ಹೊರ ಹೋಗಿ ವಾಪಸ್ಸು ಬಂದು ಕೊರಗಜ್ಜನ ದೈನಂದಿನ ಪೂಜೆಗೆಂದು ಮುಂದಾದಾಗ, ಕೊರಗಜ್ಜನ ಮೂರ್ತಿ ಬಳಿ ಅಮೆಯೊಂದು ಕಂಡು ಬಂದಿದೆ.
ಇದನ್ನು ಕಂಡು ಸನ್ನಿಧಿ ಅರ್ಚಕರಾದ ನವೀನ್ ಪಾತ್ರಿ ಅಶ್ಚರ್ಯಚಕಿತರಾದರು. ಈ ಪ್ರದೇಶವು ನಗರ ಮಧ್ಯದಲ್ಲಿದ್ದು ಅಮೆಗಳು ವಾಸಿಸುವ ಪ್ರದೇಶವಲ್ಲ. ಈ ಹಿನ್ನಲೆಯಲ್ಲಿ ಎಲ್ಲಂದಲೋ ಬಂದಿರಬಹುದೆಂದು ಊಹಿಸಿ ಅಮೆಯನ್ನ ಬಕೆಟ್ ಒಂದರಲ್ಲಿ ಹಾಕಿ ರಾತ್ರಿ ಸನ್ನಿಧಿಯ ಪೂಜೆ ಮುಗಿಸಿ ಮಲಗಿದ ಅರ್ಚಕರು ಬೆಳೆಗೆದ್ದು ನೋಡಿದಾಗ ಅಮೆಯೂ ಮತ್ತೆ ಕೊರಗಜ್ಜನ ಮೂರ್ತಿ ಕೆಳಗಡೆ ಬಂದಿರುವುದು ಕಂಡು ಬಂದಿದೆ.
ಸಾಧಾರಣವಾಗಿ ಅಮೆಯೂ ನಿಂತಲ್ಲಿ ನಿಲ್ಲದ ಪ್ರಾಣಿ. ಅದ್ರೆ ಇಲ್ಲಿ ಬಂದಿರುವ ಅಮೆ ಕೊರಗಜ್ಜನ ಮೂರ್ತಿ ಬಳಿಯಿಂದ ಕದಲದೆ ನಿಂತಿರುವುದನ್ನು ಕಂಡು ಸನ್ನಿಧಿಗೆ ಬರುವ ಭಕ್ತರು ಕೂಡ ಆಶ್ಚರ್ಯ ಚಕಿತರಾದರು.
ಅಮೆಯೂ ಕೊರಗಜ್ಜನ ವಾಹನವಾಗಿದ್ದು ,ಕೊರಗಜ್ಜನ ಸನ್ನಿಧಿಯಲ್ಲಿಯೇ ಅಮೆ ಕಂಡುಬಂದಿದ್ದನ್ನು ನೋಡಲು ಕೊರಗಜ್ಜ ಸ್ವಾಮಿ ಭಕ್ತರು ಧಾವಿಸುತ್ತಿದ್ದಾರೆ. ಇನ್ನು ವಿಶೇಷವೆನಂದರೆ ಅಮೆಯೂ ಕೊರಗಜ್ಜನ ವರ್ಣ ಚಿತ್ರವನ್ನೇ ದಿಟ್ಟಸಿ ನೋಡುತ್ತಿದೆ.
ಈ ಹಿಂದೆಯೂ ಇದೆ ರೀತಿಯ ಅದ್ಭುತ ಗಳು ಈ ಕ್ಷೇತ್ರದಲ್ಲಿ ಕಾಣಿಸಿಕೊಂಡಿತ್ತು. ಇನ್ನೂ ಕೆಲವೇ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಕೊರಗಜ್ಜನ ಕೋಲ ನಡೆಯಲಿದ್ದು, ಇದಕ್ಕೂ ಮುನ್ನ ಕೊರಗಜ್ಜನ ವಾಹನ ವಾಗಿರುವ ಅಮೆ ಕಾಣಿಸಿಕೊಂಡಿರುವುದು ಆಶ್ಚರ್ಯ ಕ್ಕೆ ಕಾರಣವಾಗಿದೆ.