Connect with us

    LATEST NEWS

    ಪುಟ್ಟ ಮಕ್ಕಳ ಆಟವಾಡುವ ವಸ್ತುಗಳಲ್ಲಿ ಲಕ್ಷವಿರಲಿ : ಆಟಿಕೆಯಲ್ಲಿದ್ದ LED ಬಲ್ಬ್ ನುಂಗಿದ್ದ ಮಗು..!

    9 ತಿಂಗಳ ಪುಟ್ಟ ಮಗುವೊಂದು ಆಕಸ್ಮಿಕವಾಗಿ ಸಣ್ಣ ಎಲ್​ ಇ ಡಿ(LED) ಬಲ್ಬ್​ ನುಂಗಿರುವ ಘಟನೆ ಮಧ್ಯಪ್ರದೇಶದ ಅಹಮದಾಬಾದ್​ನಲ್ಲಿ ನಡೆದಿದೆ.

    ಅಹಮದಾಬಾದ್ : 9 ತಿಂಗಳ ಪುಟ್ಟ ಮಗುವೊಂದು ಆಕಸ್ಮಿಕವಾಗಿ ಸಣ್ಣ ಎಲ್​ ಇ ಡಿ(LED)  ಬಲ್ಬ್​ ನುಂಗಿರುವ ಘಟನೆ ಮಧ್ಯಪ್ರದೇಶದ ಅಹಮದಾಬಾದ್​ನಲ್ಲಿ ನಡೆದಿದೆ.

    ಮಗುವನ್ನು ತಕ್ಷಣ ಸಿವಿಲ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ.

    ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಮಗು ಆಟಿಕೆ ಮೊಬೈಲ್ ಫೋನ್​ನೊಂದಿಗೆ ಆಟವಾಡುತ್ತಿರುವಾಗ ಅದರಲ್ಲಿರುವ ಆಂಟೆನಾದಲ್ಲಿ ಎಲ್​ಇಡಿ ಬಲ್ಬನ್ನು ಬಾಯಿಗೆ ಹಾಕಿಕೊಂಡಿದೆ.

    ಕೆಲ ಕ್ಷಣಗಳಲ್ಲೇ ಅದು ಗಂಟಲಲ್ಲಿ ಸಿಕ್ಕಿ ಹಾಕಿಗೊಂಡು ಉಸಿರಾಟದ ತೊಂದರೆಯಿಂದ ಮಗು ಒದ್ದಾಡಿದೆ.

    ಇದರ ಅರಿವಿಲ್ಲದ ಮನೆಯವರು ಮಗುವಿಗೆ ಏನೋ ಆಗಿದೆ ಎಂದು ಭಾವಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

    ವೈದ್ಯರು ಎಕ್ಸ್​ ರೇ ಮಾಡಿದಾಗ ಮಗು ಎಲ್​ಇಡಿ ಬಲ್ಬ್​ ನುಂಗಿರುವುದು ಗೊತ್ತಾಗಿದೆ. ಎಕ್ಸ್​ ರೇ ಯಲ್ಲಿ ಶ್ವಾಸಕೋಶದಲ್ಲಿ ಆ ವಸ್ತು ಪತ್ತೆಯಾಗಿದೆ.

    ತಕ್ಷಣ ಶಸ್ತ್ರ ಚಿಕಿತ್ಸೆ ನಡೆಸಿ ಮಗುವಿನ ಶ್ವಾಸಕೋಶದಿಂದ ಬಲ್ಬ್​ ಅನ್ನು ಹೊರ ತೆಗೆಯಲಾಗಿದೆ.

    ಪ್ರಸ್ತುತ ಮಗು ಚೇತರಿಕೆ ಕಾಣುತ್ತಿದ್ದು ಆಟವಾಡುವ ಮಕ್ಕಳ ಬಗ್ಗೆ ಪೋಷಕರು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. .

    Share Information
    Advertisement
    Click to comment

    You must be logged in to post a comment Login

    Leave a Reply