LATEST NEWS
ಪುಟ್ಟ ಮಕ್ಕಳ ಆಟವಾಡುವ ವಸ್ತುಗಳಲ್ಲಿ ಲಕ್ಷವಿರಲಿ : ಆಟಿಕೆಯಲ್ಲಿದ್ದ LED ಬಲ್ಬ್ ನುಂಗಿದ್ದ ಮಗು..!

9 ತಿಂಗಳ ಪುಟ್ಟ ಮಗುವೊಂದು ಆಕಸ್ಮಿಕವಾಗಿ ಸಣ್ಣ ಎಲ್ ಇ ಡಿ(LED) ಬಲ್ಬ್ ನುಂಗಿರುವ ಘಟನೆ ಮಧ್ಯಪ್ರದೇಶದ ಅಹಮದಾಬಾದ್ನಲ್ಲಿ ನಡೆದಿದೆ.
ಅಹಮದಾಬಾದ್ : 9 ತಿಂಗಳ ಪುಟ್ಟ ಮಗುವೊಂದು ಆಕಸ್ಮಿಕವಾಗಿ ಸಣ್ಣ ಎಲ್ ಇ ಡಿ(LED) ಬಲ್ಬ್ ನುಂಗಿರುವ ಘಟನೆ ಮಧ್ಯಪ್ರದೇಶದ ಅಹಮದಾಬಾದ್ನಲ್ಲಿ ನಡೆದಿದೆ.

ಮಗುವನ್ನು ತಕ್ಷಣ ಸಿವಿಲ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ.
ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಮಗು ಆಟಿಕೆ ಮೊಬೈಲ್ ಫೋನ್ನೊಂದಿಗೆ ಆಟವಾಡುತ್ತಿರುವಾಗ ಅದರಲ್ಲಿರುವ ಆಂಟೆನಾದಲ್ಲಿ ಎಲ್ಇಡಿ ಬಲ್ಬನ್ನು ಬಾಯಿಗೆ ಹಾಕಿಕೊಂಡಿದೆ.
ಕೆಲ ಕ್ಷಣಗಳಲ್ಲೇ ಅದು ಗಂಟಲಲ್ಲಿ ಸಿಕ್ಕಿ ಹಾಕಿಗೊಂಡು ಉಸಿರಾಟದ ತೊಂದರೆಯಿಂದ ಮಗು ಒದ್ದಾಡಿದೆ.
ಇದರ ಅರಿವಿಲ್ಲದ ಮನೆಯವರು ಮಗುವಿಗೆ ಏನೋ ಆಗಿದೆ ಎಂದು ಭಾವಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ವೈದ್ಯರು ಎಕ್ಸ್ ರೇ ಮಾಡಿದಾಗ ಮಗು ಎಲ್ಇಡಿ ಬಲ್ಬ್ ನುಂಗಿರುವುದು ಗೊತ್ತಾಗಿದೆ. ಎಕ್ಸ್ ರೇ ಯಲ್ಲಿ ಶ್ವಾಸಕೋಶದಲ್ಲಿ ಆ ವಸ್ತು ಪತ್ತೆಯಾಗಿದೆ.
ತಕ್ಷಣ ಶಸ್ತ್ರ ಚಿಕಿತ್ಸೆ ನಡೆಸಿ ಮಗುವಿನ ಶ್ವಾಸಕೋಶದಿಂದ ಬಲ್ಬ್ ಅನ್ನು ಹೊರ ತೆಗೆಯಲಾಗಿದೆ.
ಪ್ರಸ್ತುತ ಮಗು ಚೇತರಿಕೆ ಕಾಣುತ್ತಿದ್ದು ಆಟವಾಡುವ ಮಕ್ಕಳ ಬಗ್ಗೆ ಪೋಷಕರು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. .