Connect with us

LATEST NEWS

ವಿಜಯದಶಮಿ ದಿನ ಹುಟ್ಟಿದ ಹೆಣ್ಣು ಮಗುವಿಗೆ ದೇವಿ ವೇಷ ಧರಿಸಿ ಸಂಭ್ರಮ…ವಿಡಿಯೋ ವೈರಲ್

ನವರಾತ್ರಿಯ ವಿಜಯದಶಮಿಯ ದಿನದಂದು ಹುಟ್ಟಿದ ಹೆಣ್ಣು ಮಗುವಿಗೆ ದುರ್ಗೆಯ ವೇಷ ಧರಿಸಿ ಸಂಭ್ರಮಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ನವರಾತ್ರಿಯ ಹಬ್ಬವು ಭಾರತದ ಹಿಂದೂಗಳಲ್ಲಿ ಅತ್ಯಂತ ದೊಡ್ಡ ಆಚರಣೆಗಳಲ್ಲಿ ಒಂದಾಗಿದೆ. ದುರ್ಗಾ ದೇವಿಯ ಒಂಬತ್ತು ರೂಪಗಳನ್ನು ಗೌರವಿಸಿ, ಜನರು ಒಂಬತ್ತು ದಿನಗಳ ಕಾಲ ದೇವರನ್ನು ಪೂಜಿಸುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ.

ವಿಜಯದಶಮಿ ದಿನದಂದು ಹೆಣ್ಣು ಮಗು ಹುಟ್ಟಿರುವುದು ಒಂದು ರೀತಿಯ ಸಂಭ್ರಮವೇ ಸರಿ. ಅದೇ ರೀತಿ ಒಂದು ಕುಟುಂಬ ವಿಜಯ ದಶಮಿ ದಿನ ಹುಟ್ಟಿದ ಹೆಣ್ಣು ಮಗುವಿಗೆ ದುರ್ಗೆಯ ರೀತಿ ಬಟ್ಟೆ ಹಾಕಿ ತಲೆಗೆ ಕೀರಿಟ ಇಟ್ಟು ನವಜಾತ ಶಿಶುವನ್ನು ತಾಯಿಯ ಹತ್ತಿರ ತರುವುದು ವಿಡಿಯೋದಲ್ಲಿದೆ.

ವೈದ್ಯರು ನವಜಾತ ಶಿಶುಗಳನ್ನು ಸಾಮಾನ್ಯವಾಗಿ ಬಿಳಿ ಬಣ್ಣದ ಬಟ್ಟೆಯಲ್ಲಿ ಸುತ್ತಿರುತ್ತಾರೆ. ಆದರೆ ಈ ಪುಟಾಣಿ ಮಗುವನ್ನು ಸಾಂಪ್ರದಾಯಿಕ ಕೆಂಪು ಉಡುಪಿನಲ್ಲಿ ಸುತ್ತಿ, ಮಗುವಿನ ತಲೆಯ ಮೇಲೆ ದುರ್ಗಾ ದೇವಿಯನ್ನು ಹೋಲುವ ಚಿಕ್ಕ ಕಿರೀಟವನ್ನು ಇಡಲಾಗಿತ್ತು. ಮಗುವನ್ನು ನೋಡಿದ ತಕ್ಷಣ ಮನೆಯವರು ಮುಗುಳ್ನಗೆ ಬೀರಿ ಆಕೆಯ ಪಾದ ಮುಟ್ಟಿ ಆಶೀರ್ವಾದ ಪಡೆದರು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ಗೆ ಅನೇಕ ಕಮೆಂಟ್ ಗಳು ಬಂದಿದೆ. ವೈದ್ಯರ ಚಿಂತನಶೀಲ ಹಾವಭಾವಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *