Connect with us

LATEST NEWS

ನಿದ್ರೆಯಲ್ಲಿರುವ ಸಂಸದ ಕಟೀಲ್ ಎಚ್ಚೆತ್ತು ಕಾಮಗಾರಿ ಪೂರ್ಣಗೊಳಿಸಿ : ರಮನಾಥ ರೈ ಒತ್ತಾಯ

ನಿದ್ರೆಯಲ್ಲಿರುವ ಸಂಸದ ಕಟೀಲ್ ಎಚ್ಚೆತ್ತು ಕಾಮಗಾರಿ ಪೂರ್ಣಗೊಳಿಸಿ : ರಮನಾಥ ರೈ ಒತ್ತಾಯ

ಮಂಗಳೂರು,ನವೆಂಬರ್ 27 : ನಿದ್ರಾವಸ್ಥೆಯಲ್ಲಿರುವ ಸಂಸದ ನಳೀನ್ ಕುಮಾರ್ ಕಟೀಲ್ ಕೂಡಲೇ ಎಚ್ಚೆತ್ತು ಸ್ಥಗಿತಗೊಂಡಿರುವ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗಳನ್ನು ವೇಗವಾಗಿ ಮಾಡಿ ಮುಗಿಸಬೇಕೆಂದು ಮಾಜಿ ಸಚಿವ ಬಿ. ರಮನಾಥ ರೈ ಅವರು ಆಗ್ರಹಿಸಿದ್ದಾರೆ.

ಮಂಗಳೂರಿನ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ಬಿಸಿರೋಡ್-ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿ ವಿಳಂಬ ವಾಗುತ್ತದೆ.

ಸ್ಥಗಿತವಾಗಿರುವ ಕಾಮಗಾರಿಯನ್ನು ವೇಗವಾಗಿ ಮುಂದುವರಿಸಬೇಕು. ಕಾಮಾಗಾರಿ ನಡೆಸಿದ ಗುತ್ತಿಗೆದಾರರಿಗೆ ಬಿಲ್ ಪೇಮೆಂಟ್ ಬಾಕಿಯಾಗಿದೆ. ಇದು ಕೂಡ ಕಾಮಗಾರಿ ನಿಧಾನವಾಗಲು ಕಾರಣವಾಗಿದೆ.

ಸಂಸದ ನಳಿನ್ ಕುಮಾರ್ ಕಟೀಲ್ ಈ ಕೂಡಲೇ ಎಚ್ಚೆತ್ತುಕೊಳ್ಳಬೇಕು ಮತ್ತು ಈ ಕಾಮಾಗಾರಿಗಳಿಗೆ ಹೊಸದಾಗಿ ಮತ್ತೆ ಟೆಂಡರ್ ಕರೆಯಬೇಕು ಎಂದು ಒತ್ತಾಯಿಸಿದರು.

ಮಂಗಳೂರು ನಗರದ ಅತೀ ದಟ್ಟನೆಯ ಪಂಪ್ ವೆಲ್ ಫ್ಲೈ ಓವರ್ ಕೆಲಸ ನಿಧಾನವಾಗುತ್ತಿದೆ.

ಇದಕ್ಕೆ ರಾಜ್ಯ ಸರ್ಕಾರ ವನ್ನು ಹೊಣೆಗಾರಿಕೆ ಮಾಡಲಾಗುತ್ತಿದೆ. ಇದು ಸತ್ಯಕ್ಕೆ ದೂರವಾದ ವಿಚಾರ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದಕ್ಕೆ ಎಲ್ಲಾ ಕಾರಣವಾಗಿದೆ ಆದ್ದರಿಂದ ಕಾಮಗಾರಿಯನ್ನು ಕೈಗೆತ್ತಿ ಪೂರ್ಣಗೊಳಿಸಬೇಕೆಂದು ಹೇಳಿದರು.