LATEST NEWS
ಸಿಎಎ ವಿರೋಧಿ ಪ್ರತಿಭಟನೆ ಜೊತೆಗೇ ಗರಿಗೆದರಿತೇ ಮಂಗಳೂರಿನ ಉಗ್ರ ಸ್ಲೀಪರ್ ಸೆಲ್ ?
ಸಿಎಎ ವಿರೋಧಿ ಪ್ರತಿಭಟನೆ ಜೊತೆಗೇ ಗರಿಗೆದರಿತೇ ಮಂಗಳೂರಿನ ಉಗ್ರ ಸ್ಲೀಪರ್ ಸೆಲ್ ?
ಮಂಗಳೂರು ಜನವರಿ 21:ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ ಪ್ರಕರಣ ಮಂಗಳೂರಿನಲ್ಲಿ ಭಾರಿ ಆತಂಕ ಮೂಡಿಸಿದೆ. ವಿಶ್ವದ 43 ಸುರಕ್ಷಿತ ನಗರಗಳಲ್ಲಿ ಮಂಗಳೂರು ಒಂದು ಎಂಬ ಹೆಮ್ಮೆಯ ಸುದ್ದಿ ಓದಿದ ಜನರಿಗೆ ಮಂಗಳೂರಿನಲ್ಲಿ ಬಾಂಬ್ ಪತ್ತೆಯಾಗಿರುವುದು ಭಾರೀ ಅಘಾತ ಮೂಡಿಸಿದೆ. ಈವರೆಗೆ ಉತ್ತರ ಭಾರತದ ನಗರಗಳು ಅದರಲ್ಲೂ ದೆಹಲಿ, ಮುಂಬೈ, ಅಹಮದಾಬಾದ್, ಶ್ರೀನಗರ , ಜಮ್ಮು, ಬೆಂಗಳೂರು, ಚೆನೈ ಮಾತ್ರ ಉಗ್ರರ ಟಾರ್ಗೆಟ್ ಎಂದು ಗುರುತಿಸಲಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಸುಧಾರಿತ ಸ್ಪೋಟಕ ಪತ್ತೆಯಾಗಿರುವುದು ಉಗ್ರರ ಸ್ಲೀಪರ್ ಸೆಲ್ ಆಕ್ಟೀವ್ ಆಗಿರುವುದು ಸ್ಪಷ್ಟಗೊಂಡಂತಾಗಿದೆ.
ಮಂಗಳೂರಿನಲ್ಲಿ ಉಗ್ರರ ಹೆಜ್ಜೆ ಗುರುತು ಇದೇ ಮೊದಲೇನಲ್ಲ. ದೇಶವನ್ನು ಬೆಂಬಿಡದೇ ಕಾಡಿದ್ದ ಇಂಡಿಯನ್ ಮುಜಾಹಿದ್ದಿನ್ ಉಗ್ರರ ಸಂಘಟನೆಯ ಚಟುವಟಿಕೆ ಕಂಟ್ರೋಲ್ ಆಗುತ್ತಿದ್ದದ್ದು ಕರಾವಳಿಯ ನಗರ ಮಂಗಳೂರಿನಿಂದ. ಇಂಡಿಯನ್ ಮುಜಾಹಿದ್ದಿನ್ ಉಗ್ರ ಸಂಘಟನೆ ಉತ್ತರಕನ್ನಡದ ಭಟ್ಕಳದಲ್ಲಿ ಹುಟ್ಟು ಹಾಕಲಾಯಿತಾದರೂ ಅದರ ಚಟುವಟಿಕೆಯನ್ನು ಮಂಗಳೂರಿನಿಂದ ನಿಯಂತ್ರಿಸಲಾಗುತ್ತಿತ್ತು. ದೇಶದ ಯಾವುದೇ ನಗರದಲ್ಲೂ ಸ್ಪೋಟ ನಡೆದರೂ ಅದರ ಆದೇಶ ಬರುತ್ತಿದ್ದದ್ದು ಕಡಲ ನಗರ ಮಂಗಳೂರಿನಿಂದ.
ಇಂಡಿಯನ್ ಮುಜಾಹಿದ್ದಿನ್ ಉಗ್ರ ಸಂಘಟನೆ ಸಂಸ್ಥಾಪಕರಾದ ರಿಯಾಝ್ ಭಟ್ಕಳ ಹಾಗೂ ಯಾಸೀನ್ ಭಟ್ಕಳ ಮಂಗಳೂರಿನಿಂದ ದೇಶದ ಇತರ ಭಾಗಗಳ ಉಗ್ರರ ಸ್ಲೀಪರ್ ಸೆಲ್ಸ್ ಗಳನ್ನು ಆಕ್ಟಿವ್ ಮಾಡುತ್ತಿದ್ದರು.
ಈ ಹಿಂದೆ ಮುಂಬಯಿ, ಅಹಮದಾಬಾದ್, ಪುಣೆ, ಹೈದ್ರಬಾದ್, ದೆಹಲಿ ಸೇರಿದಂತೆ ಇತರ ನಗರಗಳಲ್ಲಿ ನಡೆದ ಬಾಂಬ್ ಸ್ಪೋಟ ಗಳಿಗೆ ಮಂಗಳೂರಿನ ಲಿಂಕ್ ಇದ್ದದ್ದು ಈ ಹಿಂದೆ ಬಯಲಾಗಿದೆ. ಇಂಡಿಯನ್ ಮುಜಾಹಿದ್ದಿನ್ ಉಗ್ರರು ನಡೆಸಿದ ಈ ಬಾಂಬ್ ಸ್ಪೋಟಗಳಿಗೆ ಸ್ಟೋಟಕಗಳನ್ನು ಮಂಗಳೂರಿನಿಂದಲೇ ರವಾನಿಸಲಾಗಿದ್ದು ತನಿಖೆಯಿಂದ ಈಗಾಗಲೇ ಬಹಿರಂಗಗೊಂಡಿದೆ.
ಕೇರಳದಿಂದ ಸ್ಟೋಟಕ ತಯಾರಿಕೆಗೆ ಕಚ್ಚಾ ಸಾಮಾಗ್ರಿಗಳು ಮಂಗಳೂರಿಗೆ ಬಂದು ಇಲ್ಲಿಯ ರಹಸ್ಯ ಸ್ಥಳಗಳಲ್ಲಿ ಅದನ್ನು ಸುಧಾರಿತ ಸ್ಪೋಟಕಗಳನ್ನಾಗಿ ತಯಾರಿಸಿ ದೇಶದ ಇತರ ಭಾಗಗಳಿಗೆ ತಮ್ಮ ಬಾಸ್ ಗಳ ಆಣತಿಯಂತೆ ಉಗ್ರರು ಸಾಗಿಸುತ್ತಿದ್ದರು. ಹತ್ತಾರು ಬಾಂಬ್ ಸ್ಪೋಟಗಳನ್ನು ನಡೆಸಿದ್ದ ಉಗ್ರ ಯಾಸಿನ್ ಭಟ್ಕಳ ಅಡಗಿದ್ದು ಕೂಡ ಮಂಗಳೂರಿನ ಅತ್ತಾವರದ ಅಪಾರ್ಟ್ ಮೆಂಟ್ ಒಂದರಲ್ಲಿ. ಉಗ್ರ ಚಟುವಟಿಕೆಗಳಿಗೆ ಇಲ್ಲಿ ಸಹಕಾರ ನೀಡುವ ಕೆಲ ಸಪೋರ್ಟರ್ಸ್ ಇರುವ ಹಿನ್ನಲೆಯಲ್ಲಿ ಮಂಗಳೂರು ಉಗ್ರರಿಗೆ ಅಡಗಲು ದೇಶದಲ್ಲೇ ಭಾರಿ ಸೇಫ್ ಪ್ಲೇಸ್ ಎಂದು ಹೇಳಲಾಗಿತ್ತು. ಈ ಹಿನ್ನಲೆ ಮಂಗಳೂರು ಉಗ್ರರಿಗೆ ಸ್ಲೀಪರ್ ಸೆಲ್ ಆಗಿ ಮಾರ್ಪಾಡುಗೊಂಡಿತ್ತು.
ಆದರೆ ಈ ವರೆಗೆ ರಹಸ್ಯವಾಗಿ ಸ್ಲಿಪಿಂಗ್ ಮೊಡ್ ನಲ್ಲಿದ್ದ ಈ ಸ್ಲೀಪರ್ ಸೆಲ್ ಗಳು ಈಗ ಏಕಾಎಕಿ ಆಕ್ಟಿವ್ ಆಗಿವೆ. ಅದರಲ್ಲೂ ಮಂಗಳೂರಿನ ಲೋಕಸ್ ಸ್ಲೀಪರ್ ಸೆಲ್ಸ್ ಗಳು ಆಕ್ಟಿವ್ ಆಗಿವೆ ಎಂದು ಹೇಳಲಾಗಿದೆ. ಇದರ ಭಾಗವಾಗಿಯೇ ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಸುಧಾರಿತ ಸ್ಪೋಟಕ. ತಮ್ಮ ಇರುವಿಕೆಯನ್ನು ಜಗಜ್ಜಾಹಿರ ಮಾಡಲು ಉಗ್ರರು ಕೈಗೊಂಡ ಉದ್ದೇಶಿತ ಯೋಜನೆ ಎಂದು ಅಂದಾಜಿಸಲಾಗಿದೆ.
ಕೇಂದ್ರ ಸರಕಾರದ ಸಿಎಎ ಹಾಗೂ ಎನ್ ಆರ್ ಸಿ ವಿರುದ್ದ ಮಂಗಳೂರಿನಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿರುವ ಸಂದರ್ಭಗಳಲ್ಲಿ ಸ್ಲೀಪರ್ ಸೆಲ್ ಗಳು ಚುರುಕುಗೊಂಡಿರುವುದು ಆತಂಕ ಮೂಡಿಸಿದೆ. ಕೇಂದ್ರ ಸರಕಾರದ ವಿರುದ್ದ ಭಾರಿ ಆಕ್ರೋಶ ಭುಗಿಲೆದ್ದಿರುವ ಈ ಕಾಲ ಘಟ್ಟದಲ್ಲಿ ಉಗ್ರ ಸಂಘಟನೆಗಳಿಗೆ ಸಪೋರ್ಟ್ ದೊರಕುವ ಉದ್ದೇಶದಿಂದ ಈ ಸ್ಲೀಪರ್ ಸೆಲ್ ಗಳನ್ನು ಉಗ್ರರ ಹ್ಯಾಂಡ್ಲರ್ಸ್ ಆಕ್ಟೀವ್ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಸ್ಪೋಟಕ ಪತ್ತೆ ಪ್ರಕರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ವೈಭವೀಕರಿಸಿ ಹರ್ಷ ವ್ಯಕ್ತಪಡಿಸಿದ. ಆಘಾತಕಾರಿ ಘಟನೆಗಳು ಬೆಳಕಿಗೆ ಬಂದಿವೆ. ಈ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಉಗ್ರರ ಚಟುವಟಿಕೆಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ದೊರೆಯಲಿದೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ.