Connect with us

    LATEST NEWS

    ಶಂಕಿತ ಉಗ್ರ ತಂದಿದ್ದು 2 ಬ್ಯಾಗ್ ಪತ್ತೆಯಾಗಿದ್ದು ಒಂದು ಮತ್ತೊಂದು…….?

    ಶಂಕಿತ ಉಗ್ರ ತಂದಿದ್ದು 2 ಬ್ಯಾಗ್ ಪತ್ತೆಯಾಗಿದ್ದು ಒಂದು ಮತ್ತೊಂದು… ಎಲ್ಲಿ…?

    ಮಂಗಳೂರು ಜನವರಿ 21: ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಸುಧಾರಿತ ಸ್ಪೋಟಕ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಂದು ಭಾರಿ ಅಘಾತ ಸುದ್ದಿ ಬಯಲಾಗಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೋಟಕ ಇರಿಸಿದ್ದ ಶಂಕಿತ ಉಗ್ರ ಮತ್ತೊಂದು ಬ್ಯಾಗ್ ಕೊಂಡು ಹೋಗಿರುವುದು ಈಗ ಆತಂಕಕ್ಕೆ ಕಾರಣವಾಗಿದೆ.

    ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಶಂಕಿತ ಉಗ್ರ ಮೊದಲು ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿ ಇರುವ ಸಲೂನ್ ಒಂದರ ಮುಂದೆ ಬ್ಯಾಗ್ ಒಂದನ್ನು ಇಟ್ಟಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದು ಅಲ್ಲಿ ಇರುವ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.

    ನಂತರ ಏರ್ ಪೋರ್ಟ್ ಗೆ ತೆರಳಿದ ಶಂಕಿತ ಉಗ್ರ ವಿಮಾನ ನಿಲ್ದಾಣದಲ್ಲಿ ಸ್ಪೋಟಕ ತುಂಬಿದ ಬ್ಯಾಗ್ ಇರಿಸಿ ಪುನಃ ಸಲೂನ್ ಬಳಿ ಬಂದು ಅಲ್ಲಿ ಇಟ್ಟಿದ್ದ ಬ್ಯಾಗ್ ನ್ನು ಕೊಂಡು ಹೋಗಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ಈಗ ಇನ್ನೊಂದು ಬ್ಯಾಗ್ ಎಲ್ಲಿದೆ ಎಂಬ ಆತಂಕ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕಾಡ ತೊಡಗಿದೆ. ಈ ಬಗ್ಗೆ ತನಿಖೆ ಶೋಧ ಕಾರ್ಯ ಆರಂಭಿಸಲಾಗಿದೆ.

    ಶಂಕಿತ ಉಗ್ರ ಕೊಂಡು ಹೋಗಿರುವ ಮತ್ತೊಂದು ಬ್ಯಾಗ್ ನಲ್ಲೂ ಸ್ಪೋಟಕ ಇತ್ತು ಎಂದು ಸಂಶಯ ವ್ಯಕ್ತಪಡಿಸಲಾಗಿದ್ದು, ಅದರ ಪತ್ತೆಗೆ ಭಾರಿ ಕಾರ್ಯಾಚರಣೆ ಆರಂಭಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply