Connect with us

KARNATAKA

ಮುಂದಿನ 4 ವಾರ ಮುಂಗಾರು ಮಾರುತ ದುರ್ಬಲ – ಸ್ಕೈಮೆಟ್ ವರದಿ

ಬೆಂಗಳೂರು ಜೂನ್ 13: ವಿಳಂಬವಾಗಿ ಮುಂಗಾರು ಪ್ರವೇಶಿಸಿ ಕೃಷಿ ಚಟುವಟಿಕೆ ಪ್ರಾರಂಭವೇ ಆಗದೇ ಕೃಷಿಕ ಕಂಗಾಲಾಗಿರುವ ಬೆನ್ನಲ್ಲೇ ಇದೀಗ ಮತ್ತೆ ಮುಂದಿನ 4 ವಾರ ಮುಂಗಾರು ಮಾರುತಗಳು ದುರ್ಬಲವಾಗಿರಲಿದೆ ಎಂದು ಹವಾಮಾನದ ಬಗ್ಗೆ ಮುನ್ಸೂಚನೆ ನೀಡುವ ಖಾಸಗಿ ಸಂಸ್ಥೆ ‘ಸ್ಕೈಮೆಟ್ ವೆದರ್’ ಸೋಮವಾರ ತಿಳಿಸಿದೆ.


ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಬಿಪೊರ್ಜೊಯ್‌ ಚಂಡಮಾರುತವು ಮೊದಲು ಮುಂಗಾರು ಪ್ರವೇಶವನ್ನು ವಿಳಂಬಗೊಳಿಸಿತ್ತು. ಇದೇ ಚಂಡಮಾರುತ ಈಗ ಮುಂಗಾರು ಮಾರುತಗಳ ವ್ಯವಸ್ಥೆಯ ಪ್ರಗತಿಗೆ ಅಡ್ಡಿಯಾಗುತ್ತಿದೆ. ಜತೆಗೆ ಮಾರುತಗಳು ಒಳನಾಡು ಪ್ರವೇಶವನ್ನೂ ತಡೆಯುತ್ತಿದೆ. ಈ ಬಾರಿ ಪಶ್ಚಿಮಘಟ್ಟ ದಾಟಿ ಒಳನಾಡು ಪ್ರವೇಶಿಸಲು ಹೆಣಗಾಡುತ್ತಿದೆ ಎಂದು ಸ್ಕೈಮೆಟ್‌ ಹೇಳಿದೆ.


ದುರ್ಬಲ ಮುಂಗಾರು ಮಾರುತಗಳು ಕೃಷಿಯ ಮೇಲಿನ ಪರಿಣಾಮಗಳ ಬಗ್ಗೆಯೂ ಸ್ಕೈಮೆಟ್‌ ಕಳವಳ ವ್ಯಕ್ತಪಡಿಸಿದ್ದು, ‘ಎಕ್ಸ್‌ಟೆಂಡೆಡ್‌ ರೇಂಜ್ ಪ್ರಿಡಿಕ್ಷನ್ ಸಿಸ್ಟಮ್ (ದೀರ್ಘ ಕಾಲದ ಹವಾಮಾನ ಮುನ್ಸೂಚನೆ ನೀಡುವ ವ್ಯವಸ್ಥೆ)–ಇಆರ್‌ಪಿಎಸ್‌’ ಜುಲೈ 6 ರವರೆಗೆ ಅಥವಾ ಮುಂದಿನ ನಾಲ್ಕು ವಾರಗಳವರೆಗೆ ನಿರಾಶಾದಾಯಕ ಸೂಚನೆಗಳನ್ನು ನೀಡಿದೆ. ಇದು ಬಿತ್ತನೆಯ ನಿರ್ಣಾಯಕ ಸಮಯವಾಗಿದ್ದು, ಮಳೆ ನಿರೀಕ್ಷೆಯೊಂದಿಗೆ ರೈತರು ಭೂಮಿ ಹದಗೊಳಿಸುವ ಹೊತ್ತಾದಗಿದೆ. ಮಧ್ಯ ಭಾರತ ಮತ್ತು ಪಶ್ಚಿಮ ಭಾಗಗಳು ಋತುವಿನ ಆರಂಭದಲ್ಲಿ ಅಸಮರ್ಪಕ ಮಳೆಯಿಂದಾಗಿ ಒಣಹವೆ ಎದುರಿಸಲಿವೆ’ ಎಂದು ಅದು ಹೇಳಿದೆ.

ಪ್ರಸ್ತುತ, ಮಾನ್ಸೂನ್ ಉಲ್ಬಣವು ಈಶಾನ್ಯ ಮತ್ತು ಪಶ್ಚಿಮ ಕರಾವಳಿಗೆ ಸೀಮಿತವಾಗಿದೆ. ದುರದೃಷ್ಟವಶಾತ್, ಮುಂದಿನ ದಿನಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಹವಾಮಾನ ವ್ಯವಸ್ಥೆಗಳು ಹೊರಹೊಮ್ಮುವ ಯಾವುದೇ ಲಕ್ಷಣಗಳಿಲ್ಲ, ಅವು ಮಾನ್ಸೂನ್‌ನ ನಿರ್ಣಾಯಕ ಚಾಲಕಗಳಾಗಿವೆ ಎಂದು ಸ್ಕೈಮೇಟ್ ಅಭಿಪ್ರಾಯಪಟ್ಟಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *