BELTHANGADI
ಧರ್ಮಸ್ಥಳ ಪ್ರಕರಣ – ಏಳನೆ ಪಾಯಿಂಟ್ ನಲ್ಲಿ ಯಾವುದೇ ಕಳೇಬರ ಪತ್ತೆಯಾಗಿಲ್ಲ

ಬೆಳ್ತಂಗಡಿ ಅಗಸ್ಟ್ 01: ಧರ್ಮಸ್ಥಳದಲ್ಲಿ ನೂರಾರು ಶವ ಹೂತುಹಾಕಿದ್ದೆನೆ ಎಂಬ ಹೇಳಿಕೆ ಬೆನ್ನಲ್ಲೆ ರಾಜ್ಯ ಸರಕಾರ ನೇಮಿಸಿರುವ ಎಸ್ಐಟಿ ತಂಡ ಶವಗಳ ಉತ್ಘನನ ಕಾರ್ಯ ಪ್ರಾರಂಭಿಸಿದೆ. ಈಗಾಗಲೇ ನಿನ್ನೆಯವರೆಗೆ 6 ಸ್ಥಳಗಳಲ್ಲಿ ಉತ್ಘನನ ಮಾಡಿದ್ದು. ಇಂದು ಏಳನೆ ಸ್ಥಳದಲ್ಲಿ ಉತ್ಘನನ ಮಾಡಿದೆ.
ಸಾಕ್ಷಿ ದೂರುದಾರ ಗುರುತಿಸಿದ ಏಳನೆಯ ಸ್ಥಳದಲ್ಲಿ ಯಾವುದೇ ಕಳೇಬರಗಳು ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ನದಿಬದಿಯಲ್ಲಿಯೇ ಇದ್ದ ಏಳನೇ ಸ್ಥಳದಲ್ಲಿ ಶುಕ್ರವಾರ ಬೆಳಗ್ಗೆ ಎಸ್.ಐ.ಟಿ ತಂಡ ಕಾರ್ಮಿಕರನ್ನು ಉಪಯೋಗಿಸಿ ಅಗೆಯುವ ಕಾರ್ಯ ಆರಂಭಿಸಿದ್ದು, ಅಗತ್ಯ ಬಂದರೆ ಉಪಯೋಗಿಸಲು ಹಿಟಾಚಿಯನ್ನು ಇಟ್ಟುಕೊಂಡಿದ್ದಾರೆ. ಆದರೆ ಅಗೆಯುವ ಸಂದರ್ಭದಲ್ಲಿ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಎಂಟನೇ ಸ್ಥಳದ ಅಗೆತಕ್ಕೆ ಸಿದ್ಧತೆ ನಡೆಯುತ್ತಿದೆ.
