FILM
ಪತಿ ಜೊತೆಗಿರುವ ಫೋಟೋ ಹಂಚಿಕೊಂಡ ‘ಸರಿಗಮಪ’ ಖ್ಯಾತಿಯ ಗಾಯಕಿ ಪೃಥ್ವಿ ಭಟ್

ಬೆಂಗಳೂರು ಎಪ್ರಿಲ್ 30: ಮದುವೆ ವಿಚಾರಕ್ಕೆ ನಡೆದ ವಿವಾದದ ನಡುವೆ ಇದೀಗ ಪ್ರಥ್ವಿ ಭಟ್ ತಮ್ಮ ಪತಿಯೊಂದಿಗೆ ಇರುವ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್ ಮನೆಯವರ ವಿರೋಧದ ನಡುವೆಯೂ ಪ್ರೀತಿಸಿದ ಹುಡುಗನ ಜೊತೆ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಅವರ ಪ್ರೇಮ ವಿವಾಹ ಕಾಂಟ್ರವರ್ಸಿ ಭಾರೀ ಸುದ್ದಿಯಾಗಿತ್ತು.

ಈ ನಡುವೆ ಇದೀಗ ಇತ್ತೀಚೆಗೆ ತಮ್ಮ ಪತಿ ಅಭಿಷೇಕ್ ಜೊತೆ ಪೃಥ್ವಿ ಭಟ್ ರಾಘವೇಂದ್ರ ಸ್ವಾಮಿ ದೇವಸ್ಥಾನ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ. ದೇವಸ್ಥಾನದಲ್ಲಿ ಪತಿ ಜೊತೆಗೆ ಗಾಯಕಿ ಪೃಥ್ವಿ ಭಟ್ ಫೊಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ, ಈ ದಂಪತಿಗೆ ಹಲವರು ಶುಭ ಹಾರೈಸಿದ್ದಾರೆ. ಮನೆಯವರ ವಿರೋಧದ ನಡುವೆಯೂ ಗಾಯಕಿ ಪೃಥ್ವಿ ಭಟ್, ಪ್ರೀತಿಸಿದ ಹುಡುಗನ ಜೊತೆ ವಿವಾಹವಾದರು. ಮದುವೆಯಾದ ಮೊದಲ ಬಾರಿಗೆ ಇದೀಗ ಪೃಥ್ವಿ ಭಟ್ ತಮ್ಮ ಪತಿ ಅಭಿಷೇಕ್ ಜೊತೆಗಿನ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಸದ್ಯ ಈ ಫೋಟೋ ವೈರಲ್ ಆಗಿದೆ.