LATEST NEWS
ಕಾರ್ಕಳದ ಕಾಂಗ್ರೇಸ್ ಕಾರ್ಯಕರ್ತನ ಮೇಲೆ ಪೊಲೀಸ್ ದೌರ್ಜನ್ಯ ಖಂಡನೀಯ – ಮಾಜಿ ಸಿಎಂ ಸಿದ್ದರಾಮಯ್ಯ
ಕಾರ್ಕಳ ಜುಲೈ 09: ಹಳೆಯ ಪ್ರಕರಣದ ನೆಪದಲ್ಲಿ ಕಾಂಗ್ರೇಸ್ ಕಾರ್ಯಕರ್ತನ ಮೇಲೆ ಕಾರ್ಕಳ ನಗರ ಪೊಲೀಸ್ ಇನ್ಸ್ಪೆಕ್ಟರ್ ಹಲ್ಲೆ ಪ್ರಕರಣವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಖಂಡಿಸಿದ್ದು, ನೊಂದ ಯುವಕನಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡನೀಯ.
ಇವರ ಅನಾರೋಗ್ಯವನ್ನೂ ಲೆಕ್ಕಿಸದೆ, ಹಳೆ ಸುಳ್ಳು ಕೇಸ್ ಆಧರಿಸಿ, ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಈ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ನಡೆಸಿ ನೊಂದ ಯುವಕನಿಗೆ ನ್ಯಾಯ ಒದಗಿಸಬೇಕು ಎಂದಿದ್ದಾರೆ.
ಕಾಂಗ್ರೇಸ್ ಕಾರ್ಯಕರ್ತರ ರಾಧಾಕೃಷ್ಣ ಹೀರ್ಗಾನ ಎಂಬವರ ಮೇಲೆ ಸುಮಾರು ಒಂದು ವರ್ಷದ ಹಿಂದಿನ ಎಡಿಟೆಡ್ ಪೋಸ್ಟ್ ಗಾಗಿ ಕಾರ್ಕಳ ನಗರ ಪೊಲೀಸ್ ಇನ್ಸ್ಪೆಕ್ಟರ್ ದರ್ಪ ತೋರಿದ್ದಾರೆ ಎಂದು ಹಿರ್ಗಾನ ಅವರು ಆರೋಪಿಸಿದ್ದು, ತಾನು ಹೃದಯ ರೋಗಿಯಾಗಿದ್ದರೂ ತನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತನಾಗಿರುವ ರಾಧಾಕೃಷ್ಣ ಹಿರ್ಗಾನ, ಅವರ ಹೆಸರಿನಲ್ಲಿ ಸುಮಾರು ಒಂದು ವರ್ಷದ ಹಿಂದೆ ಫೇಕ್ ಐಡಿ ಕ್ರಿಯೇಟ್ ಮಾಡಿ ಯೋಧರ ವಿರುದ್ಧ ಬರೆದಂತೆ ಪೋಸ್ಟ್ ಮಾಡಿ ಯಾರೋ ದೇಶವಿರೋಧಿ ಪೋಸ್ಟ್ ಮಾಡಿದಂತೆ ನಂಬಿಸಿ ಕಂಪ್ಲೆಂಟ್ ಮಾಡಿದ್ದರು. ಅದು ಈಗಾಗಲೇ ಹಳೆಯ ವಿಚಾರವಾಗಿದೆ ಮತ್ತು ಈಗಾಗಲೇ ಇತ್ಯರ್ಥವಾಗಿದೆ ಎಂದು ಹಿರ್ಗಾನ ಹೇಳಿದ್ದಾರೆ.
ಈಗ ಅದರ ವಿಚಾರವಾಗಿ ಈಗಾಗಲೇ ಒಮ್ಮೆ ಹೃದಯಾಘಾತವಾಗಿ ಚಿಕಿತ್ಸೆ ಪಡೆದಿದ್ದೇನೆ. ಇದೀಗ ಮತ್ತೆ ನನ್ನ ಮೇಲೆ ದರ್ಪ ತೋರಲಾಗಿದೆ. ಹಾಗೂ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಮರ್ಪಕ ಪರಿಶೀಲನೆ ನಡೆಸದೆ ಹಲ್ಲೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಪ್ರಕರಣದ ವಿರುದ್ದ ಕಾಂಗ್ರೇಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಎಸ್ ಐ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದಾರೆ.