Connect with us

    DAKSHINA KANNADA

    ಸಿದ್ಧರಾಮಯ್ಯ ಸರಕಾರ ಕೊಲೆಗಳ ಸರಕಾರವಾಗಿದೆ: ನಳಿನ್ ಕುಮಾರ್ ಕಟೀಲ್

    ಪುತ್ತೂರು, ಜುಲೈ 14: ಮುಂಬರುವ ಲೋಕಸಭಾ ಚುನಾವಣೆಗೆ ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷಗಳ ಜೊತೆಗೆ ಮೈತ್ರಿ ನಡೆಸುವ ಚರ್ಚೆ ಈವರೆಗೂ ನಡೆದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ.

    ಪುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಪಕ್ಷ ಈಗಾಗಲೇ ತಯಾರಿ ನಡೆಸುತ್ತಿದೆ. ಆದರೆ ಯಾವ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳಬೇಕು ಎನ್ನುವ ಕುರಿತ ಚರ್ಚೆ ನಡೆದಿಲ್ಲ‌ ಈ ಎಲ್ಲಾ ಚರ್ಚೆಗಳು ಜನವರಿ- ಫೆಬ್ರವರಿ ತಿಂಗಳ ಬಳಿಕ ನಡೆಯುವ ಸಾಧ್ಯತೆ ಇದೆ ಎಂದರು.

    ರಾಜ್ಯದಲ್ಲಿ ಸಿದ್ಧರಾಮಯ್ಯ ಸರಕಾರ ಕೊಲೆಗಳ ಸರಕಾರವಾಗಿದೆ. ಸರಕಾರ ಅಧಿಕಾರಕ್ಕೆ ಬಂದು ಒಂದೂವರೆ ತಿಂಗಳು ಕಳೆಯುವ ಒಳಗೆ ರಾಜ್ಯದಲ್ಲಿ ಹತ್ತಾರು ಕೊಲೆಗಳು ನಡೆದಿವೆ. ಜೈನ ಮುನಿ ಸೇರಿದಂತೆ ಎಲ್ಲರ ಹತ್ಯೆಗಳೂ ನಡೆಯಲು ಆರಂಭವಾಗಿದ್ದು, ರೈತ ವಿರೋಧಿ ನೀತಿಯಿಂದಾಗಿ ರೈತರೂ ಸರಕಾರದ ವಿರುದ್ಧ ಅಸಮಾಧಾನದಲ್ಲಿದ್ದಾರೆ ಎಂದ ಅವರು ಈ ಹಿಂದೆ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ 3 ಸಾವಿರಕ್ಕೂ ಮಿಕ್ಕಿದ ರೈತರ ಆತ್ಮಹತ್ಯೆ ನಡೆದಿತ್ತು.

    ಜೈನ ಮುನಿ ಹತ್ಯಗೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸತ್ಯಧೋಧನೆ ನಡೆಸಲಾಗಿದೆ. ಮುನಿಯನ್ನು ವಿಚಿತ್ರವಾಗಿ ಭೀಕರವಾಗಿ ಕೊಲೆ ನಡೆಸಲಾಗಿದೆ. ಮೈಸೂರಿನಲ್ಲಿ ನಡೆದ ಹತ್ಯೆಗೆ ಸಂಬಂಧಿಸಿ ಸಿ.ಟಿ.ರವಿ ನೇತ್ರತ್ವದಲ್ಲಿ ವರದಿಯನ್ನು ಸಿದ್ಧಪಡಿಸಲಾಗಿದೆ. ಎಲ್ಲಾ ಕೊಲೆಗಳನ್ನೂ ರಾಜ್ಯ‌ ಸರಕಾರ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದರು.

    ವಿಧಾನಸಭಾ ವಿರೋಧಪಕ್ಷ ನಾಯಕನ ಆಯ್ಕೆಯನ್ನು ಕೇಂದ್ರ ನಾಯಕರು ಸೂಕ್ತ ಸಮಯದಲ್ಲಿ ಮಾಡಲಿದ್ದಾರೆ. ಬಿಜೆಪಿಯ 62 ಶಾಸಕರೂ ಸಮರ್ಥರಿದ್ದಾರೆ ಎಂದ ಅವರು ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ ಬಂಡಾಯದ‌ ಬಗ್ಗೆ ಮಾತನಾಡಿದ ಅವರು ಪಕ್ಷಕ್ಕೆ ಯಾರನ್ನು ಸೇರಿಸಬೇಕು ಎನ್ನುವ ವಿಚಾರವನ್ನು ಮುಂದಿನ ದಿನಗಳಲ್ಲಿ ಪಕ್ಷ ನಿರ್ಧರಿಸಲಿದೆ. ಪುತ್ತಿಲ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಷ್ಟ್ರೀಯ ನಾಯಕರು ಮಾತುಕತೆ ನಡೆಸಲಿದ್ದಾರೆ. ಗ್ರಾಮಪಂಚಾಯತ್ ಉಪ ಚುನಾವಣೆಗೆ ಬಿಜೆಪಿ ಸ್ಪರ್ಧಿಸಲಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಕೂಡಾ ಸ್ಪರ್ಧಿಸುವ ಅವಕಾಶವಿದೆ ಎಂದು ಅವರು ಹೇಳಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *