Connect with us

FILM

ತಮಿಳು ನಟಿ ಶ್ರುತಿ ನಾರಾಯಣನ್ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ವೈರಲ್

ಚೆನ್ನೈ ಮಾರ್ಚ್ 27: ತಮಿಳು ನಟಿ ಶ್ರುತಿ ನಾರಾಯಣನ್ ಅವರದ್ದು ಎನ್ನಲಾದ ಕಾಸ್ಟಿಂಗ್ ಕೌಚ್ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಮಾರು 14 ನಿಮಿಷದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ ಕುರಿತಂತೆ ಸತ್ಯಾಸತ್ಯತೆ ಇನ್ನೂ ತಿಳಿದು ಬಂದಿಲ್ಲ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೆ ತಮ್ಮ ಸಾಮಾಜಿಕ ಜಾಲತಾಣಗಳನ್ನು ಪ್ರೈವೆಟ್ ಮಾಡಿದ್ದರು.


ಶ್ರುತಿ ನಾರಾಯಣನ್ ತಮಿಳು ಟಿವಿ ಧಾರಾವಾಹಿಗಳಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಸಿರಗಡಿಕ್ಕ ಆಸೈ ನಂತಹ ಕಾರ್ಯಕ್ರಮಗಳ ಮೂಲಕ ಮನ್ನಣೆ ಗಳಿಸಿದರು. ಈ ಕಾರ್ಯಕ್ರಮವು ಸ್ಟಾರ್ ವಿಜಯ್‌ನಲ್ಲಿ ಪ್ರಸಾರವಾಗಿತ್ತು. ವೈರಲ್ ಆಗಿರುವ ವಿಡಿಯೋವನ್ನು  ಮೊಬೈಲ್ ನ ಸ್ಕ್ರೀನ್ ರೆಕಾರ್ಡಿಂಗ್ ನ ವಿಡಿಯೋ ಇದಾಗಿದ್ದು, ತಮಿಳಿನಲ್ಲಿ ವ್ಯಕ್ತಿಯೊಬ್ಬರು ನಟಿ ಜೊತೆ ಮಾತನಾಡುತ್ತಾ ವಿಡಿಯೋವನ್ನು ತೆಗೆದಿದ್ದಾರೆ.


ಶ್ರುತಿ ನಾರಾಯಣನ್ ಅವರು ಕಾರ್ತಿಗೈ ದೀಪಂ (2022), ಸಿಟಾಡೆಲ್: ಹನಿ ಬನ್ನಿ (2024) ಮತ್ತು ಮಾರಿ (2022) ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಸದ್ಯ ವಿಡಿಯೋದಿಂದಾಗಿ ತಮಿಳು ಚಲನಚಿತ್ರೋದ್ಯಮದಲ್ಲಿನ ಕಾಸ್ಟಿಂಗ್ ಕೌಚ್ ಸಂಸ್ಕೃತಿ ಇದೆ ಎಂದು ಆರೋಪಿಸಲಾಗಿದೆ. ಖಾಸಗಿ ಆಡಿಷನ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾದ ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ಮತ್ತು ಆಕ್ರೋಶವನ್ನು ಹುಟ್ಟುಹಾಕಿದೆ. ಅಲ್ಲದೆ ವಿಡಿಯೋ ಡೀಪ್‌ಫೇಕ್ ಆಗಿರಬಹುದು ಎಂದು ಹೇಳಿಕೊಂಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *