KARNATAKA
ಶೃಂಗೇರಿ ಅಪ್ರಾಪ್ತೆ ಅತ್ಯಾಚಾರ ಪ್ರಕರಣ – ಮಗಳ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡಿದ್ದು ಹೆತ್ತ ತಾಯಿ

ಚಿಕ್ಕಮಗಳೂರು: ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ನಡೆದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ತಿರುವು ಪಡೆದುಕೊಂಡಿದೆ. ಪ್ರಮುಖ ಆರೋಪಿ ಎಂದು ವಶಕ್ಕೆ ಪಡೆದಿದ್ದ ಚಿಕ್ಕಮ್ಮ ಸಂತ್ರಸ್ಥೆಯ ಹೆತ್ತ ತಾಯಿ ಎನ್ನುವುದು ಬಹಿರಂಗವಾಗಿದೆ.
ಶೃಂಗೇರಿಯಲ್ಲಿ ವಾಸವಿದ್ದ ಶಿಗ್ಗಾವಿ ಮೂಲದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ ಗೋಚವಳ್ಳಿ ಗ್ರಾಮದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಜನವರಿ 30ರಂದು ಎಫ್ಐಆರ್ ದಾಖಲಾಗಿದೆ. 15 ವರ್ಷದ ಬಾಲಕಿ ಮೇಲೆ ಕಿಕ್ರೆ ಸ್ಮಾಲ್ ಅಭಿ ಮತ್ತು ಆತನ ಸ್ನೇಹಿತರು ಸೇರಿದಂತೆ 30ಕ್ಕೂ ಹೆಚ್ಚು ಮಂದಿ ನಿರಂತರ ಅತ್ಯಾಚಾರ ನಡೆಸಿ ಲೈಂಕಿಗ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ಹಿನ್ನಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಿದ್ದರು. ಆದರೆ ಈ ನಡುವೆ ಪ್ರಕರಣದಲ್ಲಿ ಹೆತ್ತಮ್ಮಳನೇ ಆರೋಪಿಯಾಗಿದ್ದಾಳೆ. ತಾಯಿಯಿಂದಲೇ ಅತ್ಯಾಚಾರಕ್ಕೆ ಕುಮ್ಮಕ್ಕು ಸಿಕ್ಕಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಬಂಧನವಾದಾಗ ಆರೋಪಿ ಬಾಲಕಿಯ ಚಿಕ್ಕಮ್ಮ ಎಂದು ಹೇಳಿ ಕೊಂಡಿದ್ದಳು. ಆದರೆ, ಪೊಲೀಸರ ತನಿಖೆಯಲ್ಲಿ ಚಿಕ್ಕಮ್ಮ ಅಲ್ಲ ತಾಯಿ ಅನ್ನೋದು ಬೆಳಕಿಗೆ ಬಂದಿದೆ.