Connect with us

LATEST NEWS

ಮಂಗಳೂರು -ನಾಲ್ಕು ಯುದ್ದಗಳಲ್ಲಿ ಭಾಗವಹಿಸಿದ್ದ ವಾಯಪಡೆಯ ಶೌರ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಸೇನಾಧಿಕಾರಿ ಎಚ್.ಲಕ್ಷ್ಮಣ್ ಇನ್ನಿಲ್ಲ

ಮಂಗಳೂರು ನವೆಂಬರ್ 06: ನಾಲ್ಕು ಯುದ್ದಗಳಲ್ಲಿ ಭಾಗವಹಿಸಿ ಭಾರತೀಯ ವಾಯುಪಡೆಯ ಶೌರ್ಯ ಪ್ರಶಸ್ತಿ ಪುರಸ್ಕೃತರಾಗಿದ್ದ ಚಿಲಿಂಬಿ ಹಿಲ್ ನಿವಾಸಿ ಎಚ್.ಲಕ್ಷ್ಮಣ್ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 101 ವರ್ಷ ವಯಸ್ಸಾಗಿತ್ತು.


ಭಾರತೀಯ ವಾಯುಪಡೆಯಲ್ಲಿ ಅಧಿಕಾರಿಯಾಗಿದ್ದ ಅವರು 1948, 1962, 1965, 1971ರ ಯುದ್ಧದಲ್ಲಿ ಭಾಗಿಯಾಗಿದ್ದರು. ಕರ್ತವ್ಯ ನಿಷ್ಠೆಯಿಂದಾಗಿ ಸಹೋದ್ಯೋಗಿಗಳಿಗೆ ಆದರ್ಶರಾಗಿದ್ದ ಅವರು, ಭಾರತೀಯ ಸ್ವಾತಂತ್ರ್ಯ ಪದಕ, ರಕ್ಷಾ ಪದಕಗಳನ್ನು ಪಡೆದಿದ್ದರು. ಅವರ ಸದ್ಗುಣಗಳಿಂದಾಗಿ ಸಮರದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ ಗಳಿಸಿ ವಿಶೇಷ ಮೆನ಼್ಷನ್- ಇನ್-ಡೆಸ್ಪಾಚ್ ಪ್ರಶಸ್ತಿ, ಗೌರವಾನ್ವಿತ ಶೌರ್ಯ ಪ್ರಶಸ್ತಿ ಪಡೆದಿದ್ದರು.

ಭಾರತ- ಪಾಕ್ ಸಮರದಲ್ಲಿ ಲಕ್ಷಣ ಅವರು ಪೂರ್ವ ವಲಯದ ಫೈಟರ್‌ಸ್‌ಕ್ವಾಡ್ರನ್‌ನ ಆರ್ನಮೆಂಟ್‌ ಸೆಕ್ಷನ್‌ನಲ್ಲಿ ಅಧಿಕಾರಿಯಾಗಿದ್ದರು.ಲಕ್ಷ್ಮಣ್ ಅವರು ಭಾರತೀಯ ಸ್ವಾತಂತ್ರ್ಯ ಪದಕ, ರಕ್ಷಾಪದಕಗಳನ್ನೂ ಪಡೆದಿದ್ದರು. ಸಮರದಲ್ಲಿ ತಮ್ಮ ಮೇಲಧಿಕಾರಿಗಳ ಮೆಚ್ಚುಗೆ ಗಳಿಸಿ ಮೆನ್ಸನ್ -ಇನ್-ಡೆಸ್ಪಾಚ್ ಪ್ರಶಸ್ತಿ ಪಡೆದಿದ್ದಾರೆ ಹಾಗೂ ಗೌರವಾನ್ವಿತ ಶೌರ್ಯ ಪ್ರಶಸ್ತಿ ಪಡೆದಿ ದ್ದಾರೆ. ಇವರು ಮಂಗಳೂರು ಚಿಲಿಂಬಿ ಹಿಲ್ ನಿವಾಸಿಯಾಗಿದ್ದು, 4 ಮಕ್ಕಳನ್ನು ಅಗಲಿದ್ದಾರೆ.

 

Share Information
Advertisement
Click to comment

You must be logged in to post a comment Login

Leave a Reply