LATEST NEWS
ಮಂಗಳೂರು – ಶಾರ್ಟ್ ಸರ್ಕ್ಯೂಟ್ ಗೆ ಹತ್ತಿ ಫ್ಯಾಕ್ಟರಿ ಸುಟ್ಟು ಭಸ್ಮ

ಮಂಗಳೂರು ಜೂನ್ 22: ಹತ್ತಿ ಪ್ಯಾಕ್ಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡ ಘಟನೆ ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್‌ನಲ್ಲಿರುವ ಗ್ರಾಮ ಪಂಚಾಯತ್ ಕಚೇರಿ ಬಳಿ ನಡೆದಿದೆ.
ಘಟನೆ ಮಂಗಳವಾರ ಸಂಜೆ ಸಂಭವಿದ್ದು, ಸುಮಾರು 8 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಉದ್ಯಮಿ ನೌಮಾನ್ ಅವರಿಗೆ ಸೇರಿದ ಕೋಡಿ ಎಂಟರ್ ಪ್ರೈಸಸ್ ಹತ್ತಿ ದಾಸ್ತಾನು ಹಾಗೂ ತಯಾರಿಕಾ ಕೇಂದ್ರ ಇದಾಗಿದೆ. ಬೆಂಕಿ ತಗುಲಿದ ತತ್‌ಕ್ಷಣ ಸ್ಥಳೀಯರು ಆಗಮಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದರು. ಬಳಿಕ ಮಂಗಳೂರಿನ ಪಾಂಡೇಶ್ವರ ಅಗ್ನಿಶಾಮಕ ದಳದ ವಾಹನ ಸ್ಥಳಕ್ಕೆ ಆಗಮಿಸಿತು. ಈ ವೇಳೆ ಗೋದಾಮು, ಯಂತ್ರಗಳು ಭಾಗಶಃ ಬೆಂಕಿಗೆ ಆಹುತಿಯಾಗಿದ್ದವು.
