Connect with us

    LATEST NEWS

    ಶಾರ್ಟ್ ಸರ್ಕ್ಯೂಟ್ ಗೆ ಹೊತ್ತಿ ಉರಿದ ಬಟ್ಟೆ ಅಂಗಡಿ

    ಶಾರ್ಟ್ ಸರ್ಕ್ಯೂಟ್ ಗೆ ಹೊತ್ತಿ ಉರಿದ ಬಟ್ಟೆ ಅಂಗಡಿ

    ಮಂಗಳೂರು ಸೆಪ್ಟೆಂಬರ್ 27: ಮಂಗಳೂರಿನ ಹಂಪನಕಟ್ಟೆ ವೃತ್ತದ ಬಳಿ ಬಟ್ಟೆ ಮಳಿಗೆಯಿದ್ದ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದೆ.

    ಸೆಲೆಕ್ಷನ್ ಸೆಂಟರ್ ಹೆಸರಿನ ಮೂರು ಅಂತಸ್ತಿನಲ್ಲಿದ್ದ ಬಟ್ಟೆ, ಗೋಡೌನ್, ಇನ್ನಿತರ ಸಾಮಗ್ರಿಗಳು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಉರಿದು ಬೂದಿಯಾಗಿದೆ.

    ನಸುಕಿನ ಜಾವ ಭಾರೀ ಸಿಡಿಲಿನ ಆರ್ಭಟ ಇತ್ತು. ಸಿಡಿಲಿನ ಕಾರಣದಿಂದ ಶಾರ್ಟ್ ಸರ್ಕಿಟ್ ಆಗಿ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆಯಿದೆ. ಕಟ್ಟಡ ನವೀಕರಣದ ಕೆಲಸವೂ ನಡೀತಿದ್ದು 9 ಗಂಟೆ ಹೊತ್ತಿಗೆ ಕಟ್ಟಡವನ್ನು ಆವರಿಸಿದ ಹೊಗೆಯಿಂದಾಗಿ ಘಟನೆ ಬೆಳಕಿಗೆ ಬಂತು.

    ಅದಕ್ಕೂ ಮೊದಲೇ ಒಳಭಾಗದಲ್ಲಿದ್ದ ಸಾಮಗ್ರಿಗಳು ಬೆಂಕಿಗಾಹುತಿ ಆಗಿದ್ದವು. ಬಳಿಕ ಅಗ್ನಿಶಾಮಕ ದಳ ಮತ್ತು ಪೊಲೀಸರು ಸೇರಿ ಬೆಂಕಿ ನಂದಿಸಿದರು. ನಗರದ ಹೃದಯಭಾಗದಲ್ಲಿ ಘಟನೆ ಆಗಿದ್ದರಿಂದ ಕೆಲಹೊತ್ತು ಆ ಭಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.

    VIDEO

    Share Information
    Advertisement
    Click to comment

    Leave a Reply

    Your email address will not be published. Required fields are marked *