ಪುತ್ತೂರು : ಕಲ್ಲು ಗಣಿ ಮಾಲಿಕ ಮೇಲೆ ಶೂಟೌಟ್

ಪುತ್ತೂರು ನವೆಂಬರ್ 26: ಕಲ್ಲು ಗಣಿ ಮಾಲಿಕನ ಮೇಲೆ ಶೂಟೌಟ್ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕದಲ್ಲಿ ನಡೆದಿದೆ.

ಕಲ್ಲು ಗಣಿಯ ಮಾಲಿಕ ಖಾದರ್ ಎಂಬವರ ಮೇಲೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ತಂಡ ಗುಂಡು ಹಾರಿಸಿದ್ದಾರೆ. ಮೊದಲ ಗುಂಡು ಖಾದರ್ ಅವರ ಎದೆಯ ಎಡಭಾಗಕ್ಕೆ ನುಗ್ಗಿದ್ದು, ಎರಡನೇ ಗುಂಡು ಬಲಗಣ್ಣಿನ ರಪ್ಪೆಗೆ ಬಡಿದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪೂರ್ವದ್ವೇಷದ ಹಿನ್ನೆಲೆಯಲ್ಲಿ ರೌಡಿ ಬ್ಲೇಡ್ ಸಾದಿಕ್ ಮತ್ತು ಆತನ ತಂಡ ಈ ಕೃತ್ಯ ಎಸಗಿರೋ ಶಂಕೆ ವ್ಯಕ್ತವಾಗಿದೆ.ಶೂಟೌಟ್ ನಡೆಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗಾಯಗೊಂಡ ಖಾದರ್ ಅವರನ್ನ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದ್ದು, ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.