Connect with us

    DAKSHINA KANNADA

    ರಾಜ್ಯ ಸರಕಾರದಿಂದ ಕೃತಕ ವಿದ್ಯುತ್ ಅಭಾವ ಸೃಷ್ಠಿ, ಶ್ವೇತಪತ್ರ ಹೊರಡಿಸಲು ಶೋಭಾ ಒತ್ತಾಯ

    ರಾಜ್ಯ ಸರಕಾರದಿಂದ ಕೃತಕ ವಿದ್ಯುತ್ ಅಭಾವ ಸೃಷ್ಠಿ, ಶ್ವೇತಪತ್ರ ಹೊರಡಿಸಲು ಶೋಭಾ ಒತ್ತಾಯ

    ಪುತ್ತೂರು, ನವಂಬರ್ 9: ರಾಜ್ಯ ಸರಕಾರ ರಾಜ್ಯದಲ್ಲಿ ಕೃತಕ ವಿದ್ಯುತ್ ಅಭಾವವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದು, ಸರಕಾರ ವಿದ್ಯುತ್ ಉತ್ಪಾದನೆ ಹಾಗೂ ಬಳಕೆಯ ಕುರಿತ ಶ್ವೇತಪತ್ರವನ್ನು ಜನತೆಯ ಮುಂದಿಡಬೇಕೆಂದು ಸಂಸದೆ ಹಾಗೂ ಮಾಜಿ ಇಂಧನ ಸಚಿವ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ. ಪುತ್ತೂರಿನಲ್ಲಿ ಮಾತನಾಡಿದ ಅವರು ರಾಜ್ಯದ ಮುಖ್ಯಮಂತ್ರಿಗಳೇ ಸ್ವತಹ ರಾಜ್ಯದಲ್ಲಿ 20 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ ಇದೀಗ ರಾಜ್ಯದಲ್ಲಿ ವಿದ್ಯುತ್ ಕೊರತೆ ಎದುರಾಗುತ್ತಿದ್ದು , ಹಾಸನದ ಅರಕಲಗೋಡಿನಲ್ಲಿ ಗ್ರಾಮಸ್ಥರಿಗೆ ವಿದ್ಯುತ್ತನ್ನೇ ನೀಡಲಾಗುತ್ತಿಲ್ಲ ಎಂದ ಅವರು ರಾಜ್ಯದ ಎರ್ಮರಸ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಆರಂಭಗೊಂಡಿದ್ದು, ಬಳ್ಳಾರಿಯ 1,2,3 ಘಟಕದಿಂದಲೂ ವಿದ್ಯುತ್ ಉತ್ಪಾದನೆಯಾಗುತ್ತಿದೆ. ರಾಯಚೂರಿನ 8 ಘಟಕಗಳನ್ನೂ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಅಲ್ಲದೆ ಕೇಂದ್ರದ ಕೂಡ್ಲಿಗಿ, ಕೂಡಂಕುಲಂ, ಖಾಸಗಿ ಕಂಪನಿಗಳಾದ ಯುಪಿಸಿಎಲ್ ಹಾಗೂ ಜಿಂದಾಲ್ ಕಂಪನಿಗಳೂ ರಾಜ್ಯಕ್ಕೆ ವಿದ್ಯುತ್ ನೀಡುತ್ತಿದೆ. ಆದರೂ ರಾಜ್ಯದಲ್ಲಿ ವಿದ್ಯುತ್ ಅಭಾವ ಸೃಷ್ಟಿಸುವುದರ ಹಿಂದಿನ ಮರ್ಮವೇನು ಎಂದು ಪ್ರಶ್ನಿಸಿದ ಅವರು ಸರಕಾರ ವಿದ್ಯುತ್ತನ್ನು ಖರೀದಿಸುವ ಯೋಚನೆಯನ್ನೂ ಮಾಡುತ್ತಿದೆ ಎಂದು ಆರೋಪಿಸಿದರು. ಕೆಪಿಸಿಎಲ್ ಅಧ್ಯಕ್ಷ ಸ್ವತಹ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕೆಪಿಟಿಸಿಎಲ್ ಅಧ್ಯಕ್ಷ ಇಂಧನ ಸಚಿವರಾಗಿದ್ದು, ಇವರಿಬ್ಬರ ನಡುವಿನ ಹೊಂದಾಣಿಕೆಯ ಕೊರತೆಯೋ, ಅಥವಾ ಅಧಿಕಾರಿಗಳನ್ನು ನಿಯಂತ್ರಿಸಲು ವಿಫಲರಾಗಿರುವುದೋ ಈ ಎಲ್ಲಾ ಸಮಸ್ಯೆಗಳಿಗೆ ಕಾರಣವೋ ಎನ್ನುವುದನ್ನು ಸರಕಾರ ಸ್ಪಷ್ಟಪಡಿಸಬೇಕಿದೆ ಎಂದ ಅವರು ಈ ಕಾರಣಕ್ಕಾಗಿ ರಾಜ್ಯ ಸರಕಾರ ರಾಜ್ಯದಲ್ಲಿ ಎಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದೆ ಹಾಗೂ ಬಳಕೆಯಾಗುತ್ತಿರುವ ವಿದ್ಯುತ್ ಎಷ್ಟು ಎನ್ನುವುದರ ಕುರಿತ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *