LATEST NEWS
ಶೋಭಾ ಕರಂದ್ಲಾಜೆಗೆ ಕರಾವೇ ಘೇರಾವ್

ಶೋಭಾ ಕರಂದ್ಲಾಜೆಗೆ ಕರಾವೇ ಘೇರಾವ್
ಉಡುಪಿ ಅಕ್ಟೋಬರ್ 5: ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಘೇರಾವ್ ಹಾಕಲು ಯತ್ನಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಇಂದು ಶೋಭಾ ಕರಂದ್ಲಾಜೆ ಉಡುಪಿ ಗೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಕರವೇ ಕಾರ್ಯಕರ್ತರು ಸಂಸದೆ ಶೋಭಾ ಕರಂದ್ಲಾಜೆಗೆ ಘೇರಾವ್ ಹಾಕಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ದಾರಿ ಮಧ್ಯೆಯೇ ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕಳೆದ ವಾರ ಮಣಿಪಾಲ-ತೀರ್ಥಹಳ್ಳಿ ಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಬೈಕ್ ಸ್ಕಿಡ್ ಆಗಿ ಮಗು ಮೃತಪಟ್ಟ ಘಟನೆ ಹಿನ್ನೆಲೆ ಹಾಗು ಹೆದ್ದಾರಿ ದುರವಸ್ಥೆ ಬಗ್ಗೆ ಸಂಸದೆ ಗಮನಹರಿಸದಿರುವುದಕ್ಕೆ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
