LATEST NEWS
ಕೃಷಿ ಕಾಯ್ದೆ ರದ್ದತಿ ಬಗ್ಗೆ ಮಾತೇ ಆಡದ ಕೃಷಿ ಸಚಿವೆ ಶೋಭಾ ಕರಂದ್ಲಾಜೆ…!

ಉಡುಪಿ; ಕೇಂದ್ರ ಸರಕಾರ ಜಾರಿಗೆ ತಂದಿದ್ದ ವಿವಾದಿತ ಕೃಷಿ ಕಾಯ್ದೆಯ ರದ್ದು ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದಾರೆ. ಈ ಕುರಿತಂತೆ ಕೇಂದ್ರದ ಸಹಾಯಕ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೇ ಜಾರಿಕೊಂಡಿದ್ದಾರೆ.
ಈ ಮೊದಲು ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ವಿರುದ್ದ ವಾಗ್ದಾಳಿ ನಡೆಸುತ್ತಿದ್ದ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಇದೀಗ ಅದೇ ರೈತರ ಪ್ರತಿಭಟನೆಗೆ ಮಣಿದು ಪ್ರಧಾನಿಯವರು ಕಾಯ್ದೆಗಳ ರದ್ದು ಮಾಡುವುದಾಗಿ ಘೋಷಿಸಿದ್ದಾರೆ.
ಈ ಹಿನ್ನಲೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆಗೆ ಆಗಮಿಸಿದ ಮಾಧ್ಯಮದವರನ್ನು ಒಂದು ಗಂಟೆ ಕಾಯಿಸಿ ಪ್ರತಿಕ್ರಿಯೆ ನೀಡದೆ ತೆರಳಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಕಾರ್ಯಕ್ರಮಕ್ಕೆ ಉಡುಪಿಗೆ ಆಗಮಿಸಿದ್ದ ಕೇಂದ್ರ ಸಚಿವೆ ಕೃಷ್ಣಮಠಕ್ಕೆ ಭೇಟಿ ನೀಡಿದ್ದರು.ಈ ವೇಳೆ ಪ್ರತಿಕ್ರಿಯೆಗಾಗಿ ಮಾಧ್ಯಮದವರು ಬಂದಿರುವುದನ್ನು ಅರಿತುಕೊಂಡ ಸಚಿವೆ ಒಂದು ಗಂಟೆಗೂ ಹೆಚ್ಚು ಕಾಲ ಕಾಯಿಸಿದ್ದಾರೆ.ಬಳಿಕ ಭತ್ತ ಕೃಷಿಕರ ಸಮಸ್ಯೆ ,ಬಿಟ್ ಕಾಯಿನ್ ಮತ್ತು ಪರಿಷತ್ ಚುನಾವಣೆ ಬಗ್ಗೆ ಮಾತನಾಡಿದ ಶೋಭಾ ,ಕೃಷಿ ಕಾಯಿದೆ ವಾಪಸ್ ಬಗ್ಗೆ ಪ್ರಶ್ನೆ ಕೇಳಿದಾಗ ನೇರ ಕಾರಿನತ್ತ ತೆರಳಿ ಪ್ರಯಾಣ ಬೆಳೆಸಿದರು.