LATEST NEWS
ಸಿಕ್ಕಿದನ್ನು ಬಾಚುವ ಕಾಲದಲ್ಲಿ ಶಿವರಾಯರ ಪ್ರಾಮಾಣಿಕತೆ
ಉಡುಪಿ, ಅಕ್ಟೋಬರ್ 9: ಪರರ ಸೊತ್ತು ಪಾಷಾಣಕ್ಕೆ ಸಮ ಅನ್ನೋ ಮಾತಿದೆ. ಆದರೆ ಈಗೇನಿದ್ರೂ ಸಿಕ್ಕಿದ್ದನ್ನು ಬಾಚುವ ಕಾಲ. ಆದ್ರೆ ಇಲ್ಲೊಬ್ಬ ವ್ಯಕ್ತಿ ಲಕ್ಷಾಂತರ ಬೆಲೆಬಾಳುವ ಆಭರಣವನ್ನು ಕಳೆದುಕೊಂಡವರಿಗೆ ತಲುಪುವಂತೆ ಮಾಡಿದ್ದಾರೆ.
ವೃತ್ತಿಯಲ್ಲಿ ಪತ್ರಿಕಾ ಏಜೆಂಟರಾಗಿರುವ ಶಿವರಾಯ ಕಾಮತ್ ಪ್ರಾಮಾಣಿಕತೆ ಮೆರೆದ ವ್ಯಕ್ತಿ. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಬಸ್ ನಿಲ್ದಾಣ ಪರಿಸರದಲ್ಲಿ ಕೆಲವು ದಿನಗಳ ಹಿಂದ ಮಾಂಗಲ್ಯ ಸರವೊಂದು ಕಾಮತರಿಗೆ ಸಿಕ್ಕಿತ್ತು.
ತನಗೆ ಸಿಕ್ಕ ಮಾಂಗಲ್ಯದ ಸರವನ್ನು ಮಾರಾಟ ಮಾಡಿ ಲಕ್ಷಾಂತರ ಹಣ ಜೇಬಿಗಿಳಿಸಬಹುದಿತ್ತು. ಆದ್ರೆ ಶಿವರಾಯರು ನೇರ ಹೋಗಿ ಹೆಬ್ರಿ ಪೊಲೀಸರಿಗೆ ಈ ಮಾಂಗಲ್ಯದ ಸರ ತಲುಪಿಸಿದ್ದಾರೆ. ಇದೀಗ ಹೆಬ್ರಿ ಪೊಲೀಸರು ಸರ ಕಳೆದುಕೊಂಡ ನಿಜವಾದ ಮಾಲಿಕರಿಗೆ ವಾಪಾಸು ಮಾಡಿದ್ದಾರೆ. ಪ್ರಾಮಾಣಿಕತೆ ಮೆರೆದ ಶಿವರಾಯ ಕಾಮತ್ ಗೆ ಹೆಬ್ರಿ ಪೊಲೀಸರು ಅಭಿನಂದಿಸಿದ್ದಾರೆ.