KARNATAKA
ತನ್ನ ಮೊದಲ ಬೈಕ್ ‘Yezdi’ ರೋಡ್ ಕಿಂಗ್ ನೋಡಿ ಆ ಕಾಲೇಜು ದಿನಗಳನ್ನು ನೆನೆದ ಡಿಕೆ ಶಿವಕುಮಾರ್.!
ಬೆಂಗಳೂರು : ಪ್ರತಿಯೊಬ್ಬರಿಗೂ ತಮ್ಮ ಜೀವನದ ಮೊದಲ ಬೈಕ್ ಜತೆಗೆ ವಿಶೇಷ ಬಾಂಧವ್ಯ, ಮತ್ತು ಮಧುರ ಭಾವನಾತ್ಮಕ ಸಂಬಂಧ ಇರುತ್ತದೆ. ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಕೂಡೆ ತಾವು ಓಡಿಸುತ್ತಿದ್ದ 1981 ರ ಮಾಡೆಲ್ ಹಳೇ (Yezdi) ರೋಡ್ ಕಿಂಗ್ ಬೈಕ್‌ಗೆ ಹೊಸ ರೂಪ ಕೊಟ್ಟಿದ್ದಾರೆ.
ತಮ್ಮ ಮನೆಯ ಗ್ಯಾರೇಜ್ ಸೇರಿದ್ದ 43 ವರ್ಷದ ಹಳೇಯದಾದ ಅಂದ್ರೆ 1981ರ ಮಾಡೆಲ್‌ನ ಸಿಎಇ 7684 ನಂಬರಿನ ಎಝ್ ಡಿ ರೋಡ್ ಕಿಂಗ್ ಬೈಕ ನ್ನು ವಿದ್ಯಾರ್ಥಿ ಜೀವನ ಹಾಗೂ ವಿದ್ಯಾರ್ಥಿ ಕಾಂಗ್ರೆಸ್‌ನ ರಾಜಕೀಯ ಚಟುವಟಿಕೆಗಳಿಗೆ ಡಿಕೆಶಿ ಬಳಸುತ್ತಿದ್ದರು. ಈ ಬೈಕ್ ಡಿಕೆಶಿ ಪಾಲಿಗೆ ಇಂದಿಗೂ ಲಕ್ಕಿ ಬೈಕ್ ಎನಿಸಿಕೊಂಡಿದೆ. ಬಹು ವರ್ಷಗಳ ನಂತರ ಮತ್ತೆ ಹೊಸ ರೂಪ ಪಡಕೊಂಡ ತಮ್ಮ ಬೈಕ್ ಅನ್ನು ಕಂಡು ಡಿಕೆಶಿ ಕಾಲೇಜು ದಿನಳನ್ನು ಮೆಲುಕು ಹಾಕಿದ್ದಾರೆ. ವಿಂಟೇಜ್ ಬೈಕ್ ಪ್ರೇಮಿಯಾಗಿರುವ ಸುಪ್ರೀತ್ ಎಂಬುವವರು ಭಾನುವಾರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಡಿಸಿಎಂ ಅವರ ಅವರು ಕಾಲೇಜು ದಿನಗಳಲ್ಲಿ ಬಳಸಿದ್ದ ಯಜ್ಡಿ (Yezde) ಬೈಕ್ (ನಂಬರ್ CAE 7684) ಅನ್ನು ಮರುವಿನ್ಯಾಸ ಮಾಡಿ ಸದಾಶಿವನಗರದ ನಿವಾಸಕ್ಕೆ ತಂದು ನಿಲ್ಲಿಸಿದಾಗ ಅದನ್ನು ಕಂಡ ಶಿವಕುಮಾರ್ ಅವರು ಪುಳಕಿತರಾದರು.ತಾವೇ ಬೈಕ್ ಕಿಕ್ ಮಾಡಿ ಸ್ಟಾರ್ಟ್ ಮಾಡಿ ಖುಷಿಪಟ್ಟರು. “ನಾನು ಕಾಲೇಜು ದಿನಗಳಲ್ಲಿ ಬಳಸುತ್ತಿದ್ದ ಬೈಕ್ ಇದು, ಕನಕಪುರದ ಮನೆಯಲ್ಲಿ ಧೂಳು ಹಿಡಿದಿತ್ತು. ಸುಮಾರು 40 ವರ್ಷಗಳ ನಂತರ ನನ್ನ ಸ್ನೇಹಿತರು ಅದಕ್ಕೆ ಹೊಸ ರೂಪ ಕೊಟ್ಟು ತಂದಿದ್ದಾರೆ” ಎಂದು ಆನಂದ ತುಂದಿಲರಾದರು.
ದೇಶದ ವಿವಿಧ ಭಾಗ ಹಾಗೂ ವಿದೇಶದಿಂದ ಬೈಕಿನ ಕೆಲ ಬಿಡಿ ಭಾಗಗಳನ್ನು ಆಮದು ಮಾಡಿಸಿಕೊಂಡು ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ಡಿಕೆಶಿ ತಮ್ಮ ಕಾಲೇಜು ದಿನಗಳಲ್ಲಿ ಓಡಾಡುತ್ತಿದ್ದ ಬೈಕ್ ರಿಪೇರಿ ಮಾಡಿಸಿದ್ದಾರೆ. 43 ವರ್ಷದ ಹಳೆಯ ತಮ್ಮ ವಿದ್ಯಾರ್ಥಿ ಜೀವನದ ಫೇವರೇಟ್ ಬೈಕ್ ಮನೆ ಒಳಗೆ ಮರ ಹಾಗೂ ಗ್ಲಾಸ್‌ನ ಫ್ರೇಮ್ ಮಾಡಿಸಿ ಶೋ ಪೀಸ್ ಮಾಡಿ ಇಟ್ಟುಕೊಳ್ಳಲು ಡಿಕೆಶಿ ತೀರ್ಮಾನಿಸಿದ್ದಾರೆ.