LATEST NEWS
ಲೊನಾವಾಲದಲ್ಲಿ ಶಿವಸೇನೆಯ ಮುಖಂಡ ರಾಹುಲ್ ಶೆಟ್ಟಿಯ ಗುಂಡಿಕ್ಕಿ ಹತ್ಯೆ

ಮಹಾರಾಷ್ಟ್ರ, ಅಕ್ಟೋಬರ್ 26: ಮಹಾರಾಷ್ಟ್ರದ ಲೊನಾವಾಲದಲ್ಲಿ ಶಿವಸೇನೆಯ ಮುಖಂಡನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮಾಜಿ ಶಿವಸೇನಾ ಮುಖಂಡ ಉಮೇಶ್ ಶೆಟ್ಟಿಯ ಪುತ್ರ ರಾಹುಲ್ ಶೆಟ್ಟಿಯನ್ನು ಇಂದು ಬೆಳಗ್ಗೆ 9-30ರ ಸುಮಾರಿನಲ್ಲಿ ಗುಂಡಿಟ್ಟು ಹತ್ಯೆ ಗೈಯಲಾಗಿದೆ.
43 ವರ್ಷದ ಶಿವಸೇನಾ ಸ್ಥಳೀಯ ಘಟಕದ ಮಾಜಿ ಅಧ್ಯಕ್ಷನಾಗಿದ್ದ ರಾಹುಲ್ ಶೆಟ್ಟಿಯ ಮನೆ ಮಂದೆ ಆತನ ಕುತ್ತಿಗೆಗೆ ಇರಿದು ಮೂರು ಬಾರಿ ಗುಂಡು ಹಾರಿಸಲಾಗಿದೆ. ಕೂಡಲೇ ರಾಹುಲ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದಾಗ್ಯೂ, ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ರಾಹುಲ್ ಶೆಟ್ಟಿ ಕರಾವಳಿ ಮೂಲದವರಾಗಿದ್ದಾರೆ.

ಮನೆ ಮುಂದಿನ ಅಂಗಡಿಯೊಂದರ ಬಳಿ ರಾಹುಲ್ ಟೀ ಕುಡಿಯುತ್ತಿದ್ದಾಗ ದಾಳಿ ಮಾಡಲಾಗಿದೆ. ಆತನ ತಲೆ ಹಾಗೂ ಎದೆಗೆ ಮೂರು ಗುಂಡುಗಳನ್ನು ದುಷ್ಕರ್ಮಿಗಳು ಹಾರಿಸಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪೊಲೀಸರು ಹತ್ಯೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿಯನ್ನು ವಶಕ್ಕೆ ಪಡೆದಿದ್ದು, ಶಂಕಿತ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಘಟನೆ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.