Connect with us

    DAKSHINA KANNADA

    ಶಿಶಿಲೇಶ್ವರ ದೇವರ ಮೀನುಗಳಿಗೆ ಗಾಳ – 7 ಮಂದಿ ಆರೋಪಿಗಳು ಆರೆಸ್ಟ್

    ಪುತ್ತೂರು ಜೂನ್ 23: ಬೆಳ್ತಂಗಡಿ ತಾಲೂಕಿನ ಶಿಶಿಲೇಶ್ವರ ದೇವಸ್ಥಾನದ ದೇವರ ಮೀನುಗಳನ್ನು ಗಾಳ ಹಾಕಿ ಹಿಡಿಯುತ್ತಿದ್ದ 7 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


    ಕಪಿಲಾ ನದಿ ತಟದಲ್ಲಿರುವ ಶಿಶಿಲೇಶ್ವರ ದೇವಸ್ಥಾನದಲ್ಲಿ ನದಿ ತಟದಲ್ಲಿ ಭಕ್ತರು ಆಹಾರ ನೀಡಿ ಈ ಮೀನುಗಳನ್ನು ಸಾಕುತ್ತಿದ್ದು, ಈ ಮೀನುಗಳು ದೇವರ ಮೀನುಗಳು ಎಂದ ಪ್ರಸಿದ್ದಿ ಪಡೆದಿದೆ. ಈ ಹಿನ್ನಲೆ ದೇವಸ್ಥಾನದ ಸುತ್ತಮುತ್ತ 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮೀನು ಹಿಡಿಯುವುದನ್ನು ನಿಷೇಧಿಸಲಾಗಿದೆ.

    ಆದರೂ 7 ಮಂದಿ ಆರೋಪಿಗಳನು ನಿಷೇಧವನ್ನು ಮೀರಿ ದೇವರ ಮೀನುಗಳನ್ನು ಗಾಳ ಹಾಕಿ ಹಿಡಿಯುತ್ತಿದ್ದರು. ಈ ಕೃತ್ಯವನ್ನು ಕಂಡ ಸ್ಥಳೀಯರು 7 ಮಂದಿ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *