Connect with us

    LATEST NEWS

    ಉಡುಪಿ ಮಠಾಧೀಶರನ್ನು ಮೌನವೃತಕ್ಕೆ ಕಳುಹಿಸಿದ ಶಿರೂರು ಶ್ರೀಗಳು

    ಉಡುಪಿ ಮಠಾಧೀಶರನ್ನು ಮೌನವೃತಕ್ಕೆ ಕಳುಹಿಸಿದ ಶಿರೂರು ಶ್ರೀಗಳು

    ಉಡುಪಿ ಜುಲೈ 7: ಉಡುಪಿ ಅಷ್ಟಮಠದಲ್ಲಿ ನಡೆಯುತ್ತಿರುವ ಒಳಜಗಳ ತಾರಕಕ್ಕೇರಿದೆ. ಶಿರೂರು ಶ್ರೀಗಳಿಗೂ ಉಡುಪಿಯ ಸಪ್ತಮಠಾಧೀಶರ ನಡುವೆ ಪಟ್ಟದ ದೇವರ ವಿಷಯದಲ್ಲಿ ನಡೆಯುತ್ತಿರುವ ಜಗಳ ಈಗ ಕೋರ್ಟ್ ಮೆಟ್ಟಿಲೇರಿದೆ.

    ಶೀರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳು ಮತ್ತೊಮ್ಮೆ ಅಷ್ಟ ಮಠದ ಶ್ರೀಗಳ ವಿರುದ್ಧ ಕಾನೂನು ಸಮರಕ್ಕೆ ಇಳಿದಿದ್ದಾರೆ. ತಮ್ಮ ಮಠದ ಪಟ್ಟದ ದೇವರನ್ನು ವಾಪಸ್ ನೀಡಬೇಕು ಎಂದು ಕೋರ್ಟ್ ಮೊರೆಹೋಗಿರುವ ಶೀರೂರು ಶ್ರೀಗಳು, ತಮ್ಮ ವಿರುದ್ಧ ಹೇಳಿಕೆ ನೀಡಬಾರದು ಅಂತ ಅಷ್ಟ ಮಠದ ಶ್ರೀಗಳ ವಿರುದ್ಧ ಕೋರ್ಟ್ನಿಂದ ಕೇವಿಯೆಟ್ ತಂದಿದ್ದಾರೆ.

    ಹೀಗಾಗಿ ಮೊದಲು ಶ್ರೀಗಳ ವಿರುದ್ಧ ಧ್ವನಿ ಎತ್ತಿದ್ದ ಪೇಜಾವರ ಶ್ರೀ ಸಹಿತ ಐದು ಮಠಾಧೀಶರು ಮೌನಕ್ಕೆ ಶರಣಾಗಿದ್ದಾರೆ. ಸದ್ಯ ಶೀರೂರು ಮಠದ ಪಟ್ಟದ ದೇವರು ವಿಠಲನಿಗೆ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥರು ಪೂಜೆ ಸಲ್ಲಿಸುತ್ತಿದ್ದಾರೆ.

    ಅನಾರೋಗ್ಯ ಸಂದರ್ಭದಲ್ಲಿ ಪಟ್ಟದ ದೇವರನ್ನು ಪೂಜೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಕೆಲಕಾಲ ಅದಮಾರು ಮಠದ ಕಿರಿಯ ಯತಿ ಈಶಪ್ರಿಯ ಶ್ರೀಗಳಿಗೆ ಪೂಜೆ ಸಲ್ಲಿಸಲು ನೀಡಿದ್ದೆ. ಇದೀಗ ಪಟ್ಟದ ದೇವರನ್ನ ನನಗೆ ಮರಳಿಸದೆ ಪರ್ಯಾಯ ಶ್ರೀಗಳಿಗೆ ನೀಡಿ ಅದಮಾರು ಕಿರಿಯ ಯತಿಗಳು ವಿಶ್ವಾಸ ದ್ರೋಹ ಎಸಗಿದ್ದಾರೆ ಎಂದು ಶೀರೂರು ಶ್ರೀ ಅಸಮಧಾನ ಹೊರಹಾಕಿದ್ದಾರೆ.

    ಸನ್ಯಾಸತ್ವ ಸರಿಯಾಗಿ ಪಾಲಿಸುತ್ತಿಲ್ಲ ಎಂದು ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರನ್ನ ಹೊರಗಿಟ್ಟಿದ್ದ ಅಷ್ಟಮಠ, ಇದೀಗ ಸನ್ಯಾಸತ್ವ ಸರಿಯಾಗಿ ಪಾಲಿಸುತ್ತಿಲ್ಲ ಹಾಗೂ ಉತ್ತರಾಧಿಕಾರಿ ಇಲ್ಲ ಎಂಬ ಕಾರಣಕ್ಕೆ ಶೀರೂರು ಶ್ರೀಗಳನ್ನು ದೂರವಿಡಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

    ಈ ಹಿನ್ನಲೆಯಲ್ಲಿ ಉಡುಪಿಯ ಅಷ್ಟಮಠದ ಸಮಸ್ಯೆ ದಿನದಿಂದ ದಿನಕ್ಕೆ ಜಠಿಲವಾಗುತ್ತಿದ್ದು, ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಲು ಸಿದ್ಧವಿಲ್ಲದ ಶೀರೂರು ಶ್ರೀಗಳು ಕಾನೂನು ಪಾಠ ಕಲಿಸುತ್ತೇನೆ ಅಂತ ಪಟ್ಟುಹಿಡಿದಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *