KARNATAKA
ಶಿವಮೊಗ್ಗ – ಕಾಲೇಜಿನ ಮೂರನೇ ಮಹಡಿಯಿಂದ ಬಿದ್ದು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮೇಘಶ್ರೀ ಸಾವು

ಶಿವಮೊಗ್ಗ ಡಿಸೆಂಬರ್ 05 : ದ್ವಿತೀಯ ಪಿಯುಸಿ ಕಲಿಯುತ್ತಿರುವ ವಿಧ್ಯಾರ್ನಿಯೊಬ್ಬಳು ಮೂರನೇ ಮಹಡಿಯಿಂದ ಬಿದ್ದು ಸಾವನಪ್ಪಿದ ಘಟನೆ ಶಿವಮೊಗ್ಗದ ಆದಿಚುಂಚನಗಿರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದಿದೆ. ಇಲ್ಲಿನ ಆದಿಚುಂಚನಗಿರಿ ಪದವಿಪೂರ್ವ ಕಾಲೇಜಿನಲ್ಲಿ (ಬಿಜಿಎಸ್) ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಜಿ.ಓ.ಮೇಘಶ್ರೀ (17) ಕಾಲೇಜಿನ ಮೂರನೇ ಮಹಡಿಯಿಂದ ಬಿದ್ದು ಸಾವಿಗೀಡಾಗಿದ್ದಾಳೆ.
ಮೂಲತಃ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಜನ್ನಾಪುರದ ಜಿ.ಓಂಕಾರಯ್ಯ ಪುತ್ರಿ ಮೇಘಶ್ರೀ ಕಾಲೇಜಿನ ಹಾಸ್ಟೆಲ್ ನಲ್ಲಿ ಇದ್ದುಕೊಂಡು ಓದುತ್ತಿದ್ದಳು. ಕಾಲೇಜಿನಲ್ಲಿ ಮಂಗಳವಾರ ಕಿರು ಪರೀಕ್ಷೆ ಬರೆದಿದ್ದ ಮೇಘಶ್ರೀ ಶೌಚಾಲಯಕ್ಕೆ ತೆರಳುವುದಾಗಿ ಹೇಳಿ ಪರೀಕ್ಷಾ ಕೊಠಡಿಯಿಂದ ಹೊರಬಂದಿದ್ದಳು ಎನ್ನಲಾಗಿದೆ. ಮಗಳ ಸಾವು ಅನುಮಾನಾಸ್ಪದವಾಗಿದೆ. ಕಾಲೇಜಿಗೆ ಹೆಸರು ಬರಲು ಹೆಚ್ಚಿನ ಅಂಕಗಳಿಸುವಂತೆ ಶಿಕ್ಷಕರು, ಹಾಸ್ಟೆಲ್ ಸಿಬ್ಬಂದಿ ಒತ್ತಡ ಹೇರಿ, ಮಾನಸಿಕವಾಗಿ ಹಿಂಸೆ ನೀಡಿದ್ದರಿಂದ ಸಾವನ್ನಪ್ಪಿದ್ದಾಳೆ. ಈ ಬಗ್ಗೆ ತನಿಖೆ ನಡೆಸಿ’ ಎಂದು ಮೇಘಶ್ರೀ ಪೋಷಕರು ಇಲ್ಲಿನ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿದ್ಯಾರ್ಥಿನಿ ಸಾವಿಗೆ ನ್ಯಾಯಕೊಡಿ ಎಂದು ಆಗ್ರಹಿಸಿ ಪೋಷಕರ ಜೊತೆ ನೂರಾರು ಮಂದಿ ಸೇರಿ ಆದಿಚುಂಚನಗಿರಿ ಕಾಲೇಜಿನ ಎದುರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಚರ್ಚಿಸಿ ಮಾಹಿತಿ ಪಡೆದರು.