Connect with us

  KARNATAKA

  ಶಿವಮೊಗ್ಗ : ರೌಡಿ ಶೀಟರ್ ಮೇಲೆ ಪೊಲೀಸ್ ಫೈರಿಂಗ್, ರೌಡಿ ಪರ್ವೇಜ್ ಕಾಲಿಗೆ ಗುಂಡು..!

  ಶಿವಮೊಗ್ಗ: ರೌಡಿಯೊಬ್ಬನನ್ನು ಬಂಧಿಸಲು ಹೋದ ಪೊಲಿಸರ ಮೇಲೇ  ಅಟ್ಯಾಕ್ ಮಾಡಿ ಎಸ್ಕೇಪ್​ ಆಗಲು ಯತ್ನಿಸಿದ್ದ ರೌಡಿಶೀಟರ್​ ಗೆ  ಖಾಕಿ ಪಡೆ ಗುಂಡಿನ ರುಚಿ ತೋರಿಸಿದ ಘಟನೆ ಶಿವಮೊಗ್ಗದಲ್ಲಿ ಸೋಮವಾರ (ಇಂದು) ಮುಂಜಾನೆ ನಡೆದಿದೆ.

  ರೌಡಿಶೀಟರ್ ಪರ್ವೇಜ್ ಅಲಿಯಾಸ್ ಫರ್ರು ಕಾಲಿಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಗುಂಡು ಹಾರಿಸಿದ್ದಾರೆ. ಮುಂಜಾನೆ ಶಿವಮೊಗ್ಗ ನಗರ ಹೊರವಲಯದ ಮಲ್ಲಿಗೇನಹಳ್ಳಿ ಬಳಿ ಆರೋಪಿ ರೌಡಿಶೀಟರ್​ ಇರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪೊಲೀಸರ ತಂಡ ಬಂಧನಕ್ಕೆ ತೆರಳಿದ್ದರು. ಈ ವೇಳೆ ರೌಡಿಶೀಟರ್ ಪರ್ವೇಜ್ ಪೊಲೀಸರ ಮೇಲೆಯೇ ಡ್ರ್ಯಾಗರ್​ನಿಂದ ಹಲ್ಲೆ ನಡೆಸಿದ್ದಾನೆ.  ಪೊಲೀಸ್ ಸಿಬ್ಬಂದಿ ನಾಗಪ್ಪ ಎಂಬವರು ಅಲ್ಪ ಸ್ವಲ್ಪ  ಗಾಯಗಳಿಂದ ಪಾರಾಗಿದ್ದಾರೆ. ಆರೋಪಿ ಸ್ಥಳದಿಂದ ಎಸ್ಕೇಪ್​ ಆಗಲು ಪ್ರಯತ್ನಿಸಿದ್ದಂತೆ ಪೊಲಿಸ್ ಇನ್ಸ್ ಪೆಕ್ಟರ್ ಆತ್ಮ ರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಳಿಕ ಬಂಧಿಸಿ ಇದೀಗ ಆಸಪತ್ರೆಗೆ ದಾಖಲು ಮಾಡಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply