KARNATAKA
ಶಿವಮೊಗ್ಗ : ನೀರಿನ ಬಕೆಟ್ ಗೆ ಮಗು ಬಿದ್ದು ಮೃತ್ಯು…!!

ಶಿವಮೊಗ್ಗ : ಪುಟ್ಟ ಮಗುವೊಂದು ಆಟವಾಡುತ್ತಾ ತೆರಳಿ ನೀರಿದ್ದ ಬಕೆಟ್ಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ನಡೆದಿದೆ.

ಸಾಗರದ ಜೋಸೆಫ್ ನಗರದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಆಸಿಫ್ ಎಂಬವರ ಪುತ್ರಿ ಆನಂ ಫಾತಿಮಾ ನೀರಿರುವ ಬಕೆಟ್ ಗೆಬಿದ್ದು ಮೃತಪಟ್ಟ ಮಗುವಾಗಿದೆ. ರವಿವಾರ ಸಂಜೆ ಈ ದುರ್ಘಟನೆ ಸಂಭವಿಸಿದೆ ಮಗು ಆನಂ ಮನೆಯಲ್ಲಿನ ಶೌಚಾಲಯದಲ್ಲಿದ್ದ ನೀರು ತುಂಬಿದ್ದ ಬಕೆಟ್ ಬಳಿ ಹೋದಾಗ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದೆ ಎಂದು ಹೇಳಲಾಗಿದೆ.
Continue Reading
Advertisement
Click to comment