DAKSHINA KANNADA
ಸರಕಾರ ತುಷ್ಠೀಕರಣ ಮಾಡಿದರೆ ಮುಂದೆ ಆಗಬಹುದಾದ ಅನಾಹುತಕ್ಕೆ ಸರಕಾರ ಕಾರಣವಾಗಲಿದೆ – ವಿಶ್ವ ಹಿಂದೂ ಪರಿಷತ್, ಬಜರಂಗಳ
ಪುತ್ತೂರು ಅಕ್ಟೋಬರ್ 04: ಕಳೆದ ಎರಡು ದಿನಗಳ ಹಿಂದೆ ಶಿವಮೊಗ್ಗದಲ್ಲಿ ಮಿಲಾದ್ ಆಚರಣೆ ಸಂದರ್ಭ ಹಿಂದೂಗಳ ಟಾರ್ಗೆಟ್ ಮಾಡಿ ನಡೆಸಿದ ದಾಳಿಯನ್ನು ವಿಶ್ವ ಹಿಂದೂ ಪರಿಷತ್, ಬಜರಂಗಳ ತೀವ್ರವಾಗಿ ಖಂಡಿಸುತ್ತದೆ. ಈ ಘಟನೆಯಲ್ಲಿ ಭಾಗಿಯಾದವರನ್ನು ತಕ್ಷಣ ಬಂಧಿಸಿ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ವಿಹಿಂಪ, ಬಜರಂಗದಳ ಆಗ್ರಹಿಸಿದೆ.
ಬಜರಂಗಳ ದಕ್ಷಿಣಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಪತ್ರಿಕಾಗೋಷ್ಠಿಯಲ್ಲಿ ಖಂಡನೆ ವ್ಯಕ್ತಪಡಿಸಿ, ಮಿಲಾದ್ ಮೆರವಣಿಗೆ ವೇಳೆ ಅಳವಡಿಸಿದ ಬೃಹತ್ ಕಟೌಟ್‍ಗಳನ್ನು ಪೊಲೀಸರು ತೆಗೆಸಿದ್ದಾರೆ. ಇದನ್ನು ನೆಪವಾಗಿಟ್ಟುಕೊಂಡು ರ್ಯಾಲಿ ವೇಳೆ ತಳವಾರು ಹಿಡಿದ ಸುಮಾರು 400 ಕ್ಕೂ ಅಧಿಕ ಮಂದಿ ಗ್ರಾಮವೊಂದರ ಹಿಂದೂಗಳ ಮನೆಗಳಿಗೆ ನುಗ್ಗಿ ಹಿಂದೂಗಳ ಮೇಲೆ ಹಲ್ಲೆ ನಡೆಸಿರುವುದು ಸಹಿಸಲಸಾಧ್ಯ ಎಂದ ಅವರು, ತಕ್ಷಣ ಘಟನೆಯನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ ತನಿಖೆಗಾಗಿ ಒಪ್ಪಿಸಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸಬೇಕು. ಮುಂದೆ ಇಂತಹಾ ಘಟನೆ ನಡೆಯಬಾರದು. ಈ ವಿಚಾರದಲ್ಲಿ ಸರಕಾರ ತುಷ್ಠೀಕರಣ ಮಾಡಿದರೆ ಮುಂದೆ ಆಗಬಹುದಾದ ಅನಾಹುತಕ್ಕೆ ಸರಕಾರ ಕಾರಣವಾಗಲಿದೆ ಎಂದು ಎಚ್ಚರಿಕೆ ನೀಡಿದರು.