Connect with us

FILM

ಅಕ್ಕ ಬೆಳಿಗ್ಗೆ ಯೋಗ ಕಲಿಸಿದರೆ ಬಾವ ರಾತ್ರಿ ಯೋಗ ಕಲಿಸ್ತಿದ್ದಾರೆ….!!

ಮುಂಬೈ ಜುಲೈ 25: ಬ್ಲೂಫಿಲ್ಮ್ ದಂಧೆಯಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್​ ಕುಂದ್ರಾ ಮಾಡಿದ ತಪ್ಪಿನಿಂದಾಗಿ ಅವರ ಇಡೀ ಕುಟುಂಬವೇ ಮುಜುಗರ ಅನುಭವಿಸುವಂತಾಗಿದೆ. ಶಿಲ್ಪಾ ಶೆಟ್ಟಿ ಅವರ ಗಿ ಶಮಿತಾ ಅವರನ್ನು ನೆಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ.


ಶಿಲ್ಪಾ ಶೆಟ್ಟಿ ಅಭಿನಯದ ಹಂಗಾಮಾ 2 ಓಟಿಟಿ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ ಮೂಲಕ ರಿಲೀಸ್​ ಆಗಿದೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಕ್ಕನಿಗೆ ಶಮಿತಾ ಶೆಟ್ಟಿ ಶುಭ ಕೋರಿದ್ದಾರೆ.


14 ವರ್ಷಗಳ ನಂತರ ನಿನ್ನ ನಟನೆಯ ಹಂಗಾಮಾ 2 ರಿಲೀಸ್​ ಆಗುತ್ತಿದೆ. ನಿನಗೆ ಶುಭವಾಗಲಿ. ನೀನು ಇದಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದೀಯ ಎನ್ನುವುದು ಗೊತ್ತು. ನಾನು ನಿನ್ನ ಜತೆ ಸದಾ ಇರುತ್ತೇನೆ. ನೀನು ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದೀಯ. ಪ್ರತಿ ಬಾರಿ ಮತ್ತಷ್ಟು ಸ್ಟ್ರಾಂಗ್​ ಆಗುತ್ತಿದ್ದೀಯ. ಈ ಕಷ್ಟವೂ ಕಳೆದು ಹೋಗುತ್ತದೆ. ಹಂಗಾಮಾ 2 ತಂಡಕ್ಕೆ ಆಲ್​ ದಿ ಬೆಸ್ಟ್​’ ಎಂದು ಶಮಿತಾ ಬರೆದುಕೊಂಡಿದ್ದಾರೆ.


ಆದರೆ ಆ ಪೋಸ್ಟ್​ಗೆ ಕಮೆಂಟ್​ ಮಾಡಿರುವ ಬಹುತೇಕರು ರಾಜ್​ ಕುಂದ್ರಾ ವಿಚಾರವನ್ನು ಎಳೆದು ತಂದಿದ್ದಾರೆ. ತುಂಬ ಕಟುವಾಗಿ ಟ್ರೋಲ್​ ಮಾಡಿದ್ದಾರೆ. ಅಂತಹ ಕೆಲವು ಕಮೆಂಟ್​ಗಳು ಈಗ ಸಖತ್​ ವೈರಲ್​ ಆಗುತ್ತಿದೆ. ‘ನಿಮ್ಮ ಅಕ್ಕ ನಮಗೆ ಬೆಳಗ್ಗಿನ ಯೋಗ ಪೋಸ್​ಗಳನ್ನು ಕಲಿಸಿಕೊಡುತ್ತಾರೆ. ಆದರೆ ನಿಮ್ಮ ಭಾವ ರಾತ್ರಿಯ ಯೋಗ ಪೋಸ್​ಗಳನ್ನು ಕಲಿಸಿಕೊಡುತ್ತಾರೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *