Connect with us

FILM

ಮೈಸೂರು ಪಾಕ್ ಗೆ ಫಿದಾ ಆದ ಬಾಲಿವುಡ್ ಬೆಡಗಿ ಶಿಲ್ಪಾಶೆಟ್ಟಿ

ಮೈಸೂರು ನವೆಂಬರ್ 07: ಕೆಡಿ ಸಿನೆಮಾ ಶೂಟಿಂಗ್ ಗಾಗಿ ಮೈಸೂರಿಗೆ ಆಗಮಿಸಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ತಾವು ಮೈಸೂರು ಪಾಕ್ ಸ್ವೀಟ್ ನ್ನು ಸವಿಯುತ್ತಿರುವ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.


ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ. ಈ ಭಾಗದ ಚಿತ್ರೀಕರಣಕ್ಕಾಗಿ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಮೈಸೂರಿಗೆ ಬಂದಿಳಿದಿದ್ದಾರೆ. ಮೈಸೂರು ಪಾಕ್​ ಸವಿದಿದ್ದಾರೆ. ಜೊತೆಗೆ ಜಹಾಂಗೀರ್​ ಸೇರಿದಂತೆ ವಿವಿಧ ಸಿಹಿ ಪದಾರ್ಥಗಳನ್ನು ಸವಿದಿದ್ದು ಅದರ ವಿಡಿಯೋ ವೈರಲ್​ ಆಗಿದೆ.


ಬೆಡಗಿ ಶಿಲ್ಪಾ ಸಿಹಿ ಪದಾರ್ಥಗಳಿಂದ ದೂರವೇ ಉಳಿದವರು. ಆದರೂ ಅವರು ಆಗಾಗ್ಗೆ ಇಂಥ ಸಿಹಿಗಳನ್ನು ತಿನ್ನುವುದು ಉಂಟು. ಅಷ್ಟಕ್ಕೂ ಅವರಿಗೆ ಕರ್ನಾಟಕವೇನೂ ಹೊಸದಲ್ಲವಲ್ಲ. ಮಂಗಳೂರಿನ ಬೆಡಗಿ ಕನ್ನಡತಿ ಇವರು. ಇಲ್ಲಿಯ ಪರಿಚಯವೂ ಚೆನ್ನಾಗಿಯೇ ಇದೆ. ಇದೀಗ ಮೈಸೂರಿನ ಮೈಸೂರು ಪಾಕ್​ ಮತ್ತು ಇತರ ಖಾದ್ಯಗಳನ್ನು ತಮ್ಮ ತಂಡದ ಜೊತೆ ಸವಿದಿದ್ದು, ಅದರ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *