LATEST NEWS
ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್ ನಲ್ಲಿ ಹಿಂದೂ ಹುಡುಗರು ಮಾರ್ಕೆಟ್ ನಲ್ಲಿ ನುಗ್ಗಿ ನುಗ್ಗಿ ಹೊಡೆದಿದ್ದಾರೆ – ವಿವಾದಾತ್ಮಕ ಹೇಳಿಕೆ ನೀಡಿದ ಶರಣ್ ಪಂಪ್ವೆಲ್
ತುಮಕೂರು ಜನವರಿ 29: ಯುವ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ತುಮಕೂರಿನಲ್ಲಿ ನಡೆದ ಬಜರಂಗದಳದ ಶೌರ್ಯ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಶರಣ್ ಪಂಪ್ವೆಲ್, ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ್ದ ಮುಸ್ಲಿಂ ಜಿಹಾದಿಗಳ ವಿರುದ್ದ ಸುರತ್ಕಲ್ ನಲ್ಲಿದ್ದ ಬಿಸಿ ರಕ್ತದ ಯುವಕರು ಮಾರ್ಕೆಟ್ ನಲ್ಲಿ ಜನರು ಇರುವಂತ ಸಂದರ್ಭದಲ್ಲೇ ನುಗ್ಗಿ ನುಗ್ಗಿ ಹೊಡೆದ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರ ನೀಡಿದ್ದಾರೆ. ಇದು ಹಿಂದೂ ಯುವಕರ ತಾಕತ್ತು, ಇದು ಹಿಂದೂ ಯುವಕರ ಸಾಮರ್ಥ್ಯ ಎಂದು ಹೇಳಿಕೆ ನೀಡಿದ್ದಾರೆ. ಇದೀಗ ಸದ್ಯ ವಿವಾದಕ್ಕೆ ಕಾರಣವಾಗಿದೆ.
ಅಲ್ಲದೆ ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಮಾಡುತ್ತಿರುವ ವಿಚಾರ ಗುಜರಾತ್ ಗಲಭೆ ವಿಚಾರ ಕುರಿತಂತೆ ಹೇಳಿಕೆ ನೀಡಿರುವ ಶರಣ್ ಪಂಪ್ 59 ಜನ ಕರಸೇವಕರ ಹತ್ಯೆಗೆ ಪ್ರತಿಕಾರವಾಗಿ 2 ಸಾವಿರ ಜನರ ಹತ್ಯೆ ಮಾಡಿದ್ದೇವೆ. ಇದು ಹಿಂದೂಗಳ ಪರಾಕ್ರಮ. ಹಿಂದುಗಳು ಷಂಡರಲ್ಲ ಎಂದು ಈ ಘಟನೆ ತೋರಿಸುತ್ತದೆ ಎಂದಿದ್ದಾರೆ.
ಹಿಂದೂ ಸಮಾಜ ಯಾವತ್ತೂ ನಪುಂಸಕ ಸಮಾಜ ಅಲ್ಲ. ನಾವು ನಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ್ದೇವೆ. ಒಂದು ಸಲ ಗುಜರಾತಿನ ಘಟನೆಯನ್ನು ನೆನೆಪು ಮಾಡಿಕೊಳ್ಳಿ. ಅಯೋದ್ಯೆಯ ಮಂದಿರಕೋಸ್ಕರ 58 ಜನ ಸೈನಿಕರು ಕರಸೇವೆಗಾಗಿ ರೈಲಿನಲ್ಲಿ ಬರಬೇಕಾದರೆ ಆ ರೈಲನ್ನು ಸುಟ್ಟು 59 ಕರ ಸೇವಕರ ಹತ್ಯೆ ಮಾಡಿದ್ದರು. ಅದರ ಬಳಿಕ ಗುಜರಾತ್ ಯಾವ ರೀತಿ ಉತ್ತರ ಕೊಟ್ಟಿತು ಎಂಬುದನ್ನು ಯೋಚಿಸಿ. ಯಾವ ಹಿಂದೂನು ಮನೆಯಲ್ಲಿ ಕುಳಿತುಕೊಂಡಿಲ್ಲ. ರಸ್ತೆಗೆ ಇಳಿದರು ಮನೆ ಮನೆಗೆ ನುಗ್ಗಿದರು. ಕರಸೇವಕರ ಹತ್ಯೆ ನಡೆದಿದ್ದು 59. ಆದರೆ, ಗುಜರಾತಿನಲ್ಲಿ ನಂತರ ನಡೆದ ಹತ್ಯೆಯ ಸಂಖ್ಯೆ ಎಷ್ಟು? ಇನ್ನೂ ಲೆಕ್ಕ ಸಿಕ್ಕಿಲ್ಲ. ಸುಮಾರು 2 ಸಾವಿರ ಹತ್ಯೆಯಾಗಿದೆ. ಇದು ಹಿಂದೂಗಳ ಪರಾಕ್ರಮ ಎಂದರು.